ಪುತ್ತೂರು: ವೀರಮಂಗಲ ಬಳಿ ಭಾನುವಾರ ಕಾಣಿಸಿಕೊಂಡ ಆನೆ ನಿನ್ನೆ ರಾತ್ರಿಯಿಂದ ಶಾಂತಿಗೋಡಿನಲ್ಲಿ ಪ್ರತ್ಯಕ್ಷವಾಗಿದೆ.

ಸ್ಥಳೀಯ ಮೋಹನ ಕಂರ್ಬಡ್ಕ ಎಂಬವರ ಮನೆ ಗೇಟು ಮುರಿದು ತೋಟಕ್ಕೆ ಲಗ್ಗೆಯಿಟ್ಟಿದೆ. ಪರಿಣಾಮ ತೆಂಗಿನ ಮರಗಳಿಗೆ ಹಾನಿಯಾಗಿದೆ.

ಬಳಿಕ ಆನೆ ಶಾಂತಿಗೋಡು ಗೇರು ಸಂಶೋಧನಾ ನಿರ್ದೇಶನಾಲಯದ ಗೇರು ತೋಟಕ್ಕೆ ಲಗ್ಗೆಯಿಟ್ಟಿದೆ ಎನ್ನಲಾಗಿದೆ.
ಆನೆ ಪ್ರತ್ಯಕ್ಷದ ಪರಿಣಾಮ ಶಾಲಾ ಮಕ್ಕಳು ಶಾಲೆಗೆ, ಗೇರು ಸಂಶೋಧನಾಲಯದ ಸಿಬ್ಬಂದಿಗಳು ಭಯದಿಂದ ಕೆಲಸಕ್ಕೆ ತೆರಳುವಂತಾಗಿದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.