ಪುತ್ತೂರು: ನೂರು ವರ್ಷ ಹಳೆಯದಾದ ಅಶ್ವತ್ಥ ಮರವೊಂದು ಧರೆಗುರುಳಿದ ಘಟನೆ ಶಾಂತಿಗೋಡಿನ ಕೈಂದಾಡಿಯಲ್ಲಿ ಇಂದು ನಡೆದಿದೆ.

ಮರ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ರಸ್ತೆಗೆ ಉರುಳಿದ ಪರಿಣಾಮ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯುತ್ತಿದೆ. ಗ್ರಾಮದ ಹಲವು ದೈವಸ್ಥಾನಗಳ ಪ್ರಸಾದ ವಿತರಣೆಗೆ ಈ ಅಶ್ವತ್ಥ ಮರದ ಎಲೆಯನ್ನು ಬಳಕೆ ಮಾಡುತ್ತಿದ್ದರು.