ಪುತ್ತೂರು: ಒಂದು ಸರಕಾರಿ ಶಾಲೆ ಹೇಗಿರಬೆಕೆಂಬುದಕ್ಕೆ ಕಾವು ಸರಕಾರಿ ಹಿ ಪ್ರಾ ಶಾಲೆಯೇ ಉದಾಹರಣೆಯಾಗಿದೆ, ಸರಕಾರ ಕೆಪಿಎಸ್ ಸ್ಕೂಲ್ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕಾವು ಸರಕಾರಿ ಉ ಹಿ ಪ್ರಾ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸ,ಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಈ ಶಾಲೆಯನ್ನು ದತ್ತು ಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಿಂದ ಇಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದೆ ಎಂದು ಹೇಳಿದರು.
ಕಾವಿನಲ್ಲಿ ಈಗ ಎಂಟನೇ ತರಗತಿಯತನಕ ತರಗತಿಗಳು ನಡೆಯುತ್ತಿದೆ, ಮುಂದೆ ಇದನ್ನು ಪ್ರೌಢ ಶಾಲೆಯನ್ನಾಗಿ ಪರವರ್ತಿಸಬೇಕು ಮತ್ತು ಕೆಪಿಎಸ್ ಸ್ಕೂಲ್ ಆಗಿ ಮಾಡಬೇಕು ಎಂದು ಶಾಲಾ ಅಭಿವೃದ್ದಿ ಸಮಿತಿಯವರ ಮೂಲಕ ಕಾವು ಹೇಮನಾಥ ಶೆಟ್ಟಿಯವರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಮೊದಲ ಆಧ್ಯತೆಯಲ್ಲೇ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿದರು.
ದತ್ತುಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕಾವು ಶಾಲೆಯಲ್ಲಿ ಪ್ರಸ್ತುತ 480 ಮಕ್ಕಳಿದ್ದಾರೆ. ಎಲ್ ಕೆ ಜಿ ಯುಕೆಜಿ ತರಗತಿಗಳಿಗೆ ಎ ಸಿ ಅಳವಡಿಸಲಾಗಿದೆ, ಎಲ್ಲಾ ಕಠಡಿಗಳಿಗೂ ಫ್ಯಾನ್ ಇದೆ, ಮೈಕ್ ವ್ಯವಸ್ಥೆ ಇದೆ, ಮನೆಯಿಂದ ಶಾಲೆಗೆ ಬರಲು ಬಸ್ ಸೌಕರ್ಯವೂ ಇದೆ, ಒಂದು ಖಾಸಗಿ ಶಾಲೆಯಲ್ಲಿ ಏನೆಲ್ಲಾ ವ್ಯವಸ್ಥೆಗಳು ಕಲಿಕೆಗೆ ಇದೆಯೋ ಅದೆಲ್ಲವೂ ಇಲ್ಲಿದೆ ದು ಹೇಳಿದರು.
ಮೈಸೂರಿನ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಪಿ ಎಂ ರಾಧಾಕೃಷ್ಣ ಮೂರ್ಜೆ ಅಭಿನಂದನಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಣಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಾವು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ್ತಮೂಡೆತ್ತಾಯ, ಕಾವು ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ ಗ್ರಾಪಂ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕಾವು, ಬಿಕೆ ಅಬ್ದುಲ್ ರಹಿಮಾನ್, ಸಲ್ಮಾ, ಪ್ರವೀಣಾ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೆ ಕೆ ಇಬ್ರಾಹಿಂ ಹಾಜಿ, ಕಾವು ಕ್ಲಸ್ಟರ್ ಸಿಆರ್ಪಿ ಕೆವಿಎಲ್ಎನ್ ಪ್ರಸಾದ್, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯತೀಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಸಿ. ಎಚ್. ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ ಸ್ವಾಗತಿಸಿ ವಂದಿಸಿದರು.