ಹೊಸದಿಲ್ಲಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೇಂದ್ರದ ನರೇಂದ್ರ ಮೋದಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ಪಕ್ಷಕ್ಕೆ ಬಲವಾದ ನೆಲೆ ಒದಗಿಸುವಲ್ಲಿ ಅಣ್ಣಾಮಲೈ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ.
ಇಂದು ಸಂಜೆ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಲ್ಲಿ ಅಣ್ಣಾಮಲೈ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಅಣ್ಣಾಮಲೈಗೆ ಕೇಂದ್ರದಿಂದ ಕರೆ ಹೋಗಿದೆ. ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲುದ್ದೇಶಿಸಲಾಗಿದೆ. ಸಚಿವರಾಗಿ ರಾಜ್ಯಸಭೆ ಸದಸ್ಯರಾಗಲು 6 ತಿಂಗಳ ಕಾಲಾವಕಾಶ ಇದೆ.
ಅಣ್ಣಾಮಲೈ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದವರು. ಕಾರ್ಕಳದಲ್ಲಿ ಅವರು ಮೊದಲು ಕರ್ತವ್ಯ ನಿಭಾಯಿಸಿದ್ದರು. ಉಡುಪಿ ಎಸ್‌ಪಿಯಾಗಿ ಉತ್ತಮ ಕೇಲಸ ಮಾಡಿ ದಕ್ಷ ಅಧಿಕಾರಿ ಎಂದು ಕರೆಸಿಕೊಂಡಿದ್ದರು. ಆರಂಭದ ವೃತ್ತಿ ಕಾರ್ಕಳದಲ್ಲಿ ಪ್ರಾರಂಭಿಸಿದ ಕಾರಣ ಅಣ್ಣಾಮಲೈಗೆ ಕಾರ್ಕಳದ ಜೊತೆ ಭಾವನಾತ್ಮಕ ನಂಟು ಇದೆ.
ಪೊಲೀಸ್ ವೃತ್ತಿಯನ್ನು ಅರ್ಧದಲ್ಲೇ ಬಿಟ್ಟು ರಾಜಕೀಯ ಸೇರಿರುವ ಅಣ್ಣಾಮಲೈ ಬಿಜೆಪಿ ಅಗ್ರಗಣ್ಯ ನಾಯಕರಾಗಿ ಪರಿಗಣಿಸಲ್ಪಡುತ್ತಿದ್ದಾರೆ.
ಯುವಕರ ಕಣ್ಮಣಿಯಾಗಿರುವ ಅಣ್ಣಾಮಲೈ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮೋದಿ ಯುವ ಮತದಾರರಲ್ಲಿ ವಿಶ್ವಾಸ ಹುಟ್ಟಿಸುವ ಪ್ರಯತ್ನ ಮಾಡಲಿದ್ದಾರೆ.