ರೈತರ ಪಹಣಿಗಳಿಗೆ ಆಧಾರ್ ಸೀಡಿಂಗ್ ಗೆ ಆದೇಶ | ಕೊನೆಯ ದಿನಾಂಕ ಯಾವಾಗ ? ಇಲ್ಲಿದೆ ಡಿಟೈಲ್ಸ್

ಪುತ್ತೂರು : ಕರ್ನಾಟಕ ಸರಕಾರ ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿದ್ದು, ಎಲ್ಲಾ ರೈತರು ಪಹಣಿಗಳಿಗೆ ಸೀಡಿಂಗ್ ಮಾಡುವಂತೆ ಆದೇಶಿಸಲಾಗಿದೆ.


ಯೋಜನೆಯ ಅಂಗವಾಗಿ ಎಲ್ಲಾ ರೈತರು ತಮ್ಮ ಜಮೀನುಗಳ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡದೇ ಇದ್ದಲ್ಲಿ ಬ್ಯಾಂಕ್ ಸಾಲ ಸೌಲಭ್ಯ, ಬೆಳೆ ಪರಿಹಾರ, ಬೆಳೆ ವಿಮೆ, ಕೃಷಿ ಸೌಲಭ್ಯಗಳು, ಉಪನೋಂದಣಾಧಿಕಾರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಇನ್ನಿತರ ಸರಕಾರ ಸೇವೆಗಳಿಂದ ವಂಚಿತರಾಗುವ ಕುರಿತು ತಿಳಿಸಿದೆ.


ಆದ್ದರಿಂದ ಜೂ.10 ರ ಒಳಗಾಗಿ ಎಲ್ಲಾ ಖಾತೆದಾರರು ಮತ್ತು ಜಂಟಿ ಖಾತೆದಾರರು ತಮ್ಮ ತಮ್ಮ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕೆಂದು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top