ಪುತ್ತೂರು : ಊರಿನ ಹಾಗೂ ಇತರೆ ದಾನಿಗಳ ನೆರವಿನಿಂದ ತಮ್ಮ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯನ್ನು ನವೀಕರಣ ಮಾಡಿದ್ದು ಅಭಿನಂದನಾರ್ಹ ಕಾರ್ಯಕವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಕೆದಿಲ ಅನುದಾನಿತ ಹಿ ಪ್ರಾ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಇದೇ ಶಾಲೆಯ ಶೌಚಾಲಯಕ್ಕೆ 5ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು.
ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಿಕ್ಷಣ ಅತೀ ಅಗತ್ಯವಾಗಿದೆ. ಬಡವರ ಮಕ್ಕಳೂ ಇಂಗ್ಲೀಷ್ ಮಾತನಾಡಬೇಕು, ಒಳ್ಳೆಯ ಕೆಲಸವನ್ನು ಪಡೆಯಬೇಕು ಇಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿರುವುದಾಗಿ ಶಾಸಕರು ಹೇಳಿದರು. ಕೆಪಿಎಸ್ ಸಿ ಮಾದರಿ ಶಾಲೆಗಳು ಎಲ್ಲಾ ಕಡೆ ಆರಂಭ ಮಾಡುವ ಬಗ್ಹೆ ಸರಕಾರದ ಆಲೋಚನೆ ಇದೆ. 13500 ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಸರಕಾರಿ ಶಾಲೆಯಲ್ಲಿ ಎಲ್ಲೂ ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.