ಪಂಜ : ಪಂಜ ಪೇಟೆ ಹೃದಯ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕ್ಷುಲ್ಲಕ ವಿಚಾರ ಮುಂದಿಟ್ಟು ಅಂಗಡಿ ಬಂದ್ ಮಾಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಈ ಹಿನ್ನೆಲೆಯಿಂದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಭಾಜಪಾ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತ ರು ಬೃಹತ್ ಪ್ರತಿಭಟನೆ ಪಂಜ ಪೇಟೆಯಲ್ಲಿ ಜೂ 8 ರಂದು ಜರುಗಿತು.
ಸುಳ್ಯ ಮಂಡಲ ಅಧ್ಯಕ್ಷ ವೆಂಕಟ ವಳಂಲಬೆ,ಮಾಜಿ ಮಂಡಲ ಸದಸ್ಯ ರಾಕೇಶ್ ಕೆಡೆಂಜಿ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.