ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡುವುದರಿಂದ ಉದ್ಯೋಗದಲ್ಲಿ ವಿಫಲ ಅವಕಾಶಗಳಿವೆ. ಪತ್ರಿಕಾ ವರದಿಯಂತ ಕೋರ್ಸುಗಳು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಬದುಕನ್ನು ರೂಪಿಸಲು ಸಹಕಾರಿಯಾಗಬಲ್ಲದು ಎಂದು ಅಂಬಿಕಾ ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಸಂಘ ಸಹಯೋಗದಲ್ಲಿ ಆಯೋಜಿಸಿದ ‘ಪತ್ರಿಕಾವರದಿ – ತಂತ್ರಗಳು ಹಾಗೂ ಸಾಧ್ಯತೆಗಳು ‘ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಯಾಗಿ ಮಾತನಾಡಿದರು.
ಬರವಣಿಗೆ ಹಾಗೂ ಪತ್ರಿಕೋದ್ಯಮ ಒಂದು ಕಲೆ. ನಮ್ಮ ಹವ್ಯಾಸ ನಮ್ಮ ವೃತ್ತಿಯಾಗಿ ಪರಿಣಮಿಸಲುಬಹುದು. ಇದು ಮನಸ್ಸಿಗೆ ಮುದವನ್ನು ನೀಡುತ್ತದೆ ನಮ ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದೇ ಪತ್ರಿಕೆಯಲ್ಲಿ ವರದಿ ಮಾಡುವುದಕ್ಕೆ ಒಂದು ರೀತಿಯ ಬಂಡವಾಳ ಎನ್ನಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ ಆಂಟನಿ ಪ್ರಕಾಶ್ ಮೊಂತೆರೂ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಎಂಬುದು ಬಹಳ ಮುಖ್ಯ ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಭಾಷಾಜ್ಞಾನ ಮುಖ್ಯ ಆದುದರಿಂದ ವಿದ್ಯಾರ್ಥಿಗಳು ಪತ್ರಿಕಾವರದಿಯನ್ನು ಬರೆಯುವಾಗ ಭಾಷೆಯ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾಕ್ಟರ್ ವಿಜಯಕುಮಾರ್ ಮೊಳೆಯಾರ್ ಸ್ವಾಗತಿಸಿದರು .ವಿದ್ಯಾರ್ಥಿನಿ ರಶ್ಮಿ ಎಚ್. ವಂದಿಸಿದರು ವಿದ್ಯಾರ್ಥಿನಿ ಪೂಜಾ ಎಂ. ಕಾರ್ಯಕ್ರಮ ನಿರೂಪಿಸಿದರು.