ಶಾಲಾ ಬಾಲಕನಿಗೆ ಹೊಡೆದ ಶಿಕ್ಷಕ | ಆಸ್ಪತ್ರೆಗೆ ದಾಖಲು

ಕಡಬ : ಸರ್ಕಾರಿ ಶಾಲಾ ಸಹಶಿಕ್ಷಕನೊಬ್ಬ ಹೊಡೆದ ರಭಸಕ್ಕೆ ಶಾಲಾ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜೂ.6 ರಂದು ಕಡಬದಿಂದ ವರದಿಯಾಗಿದೆ.

ಶಿಕ್ಷಕ ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಟ್ಟೆ ಇದ್ದದ್ದನ್ನು ಗಮನಿಸಿದ ಶಿಕ್ಷಕ ಈ ವಿದ್ಯಾರ್ಥಿಯೇ ಇಟ್ಟಿರುವುದಾಗಿ ಸಂಶಯಿಸಿ ಬೆನ್ನಿಗೆ ಹೊಡೆದಿದ್ದಾರೆನ್ನಲಾಗಿದೆ. ಹೊಡೆತದ ರಭಸಕ್ಕೆ ಬಾಲಕನ ತಲೆ ಪಕ್ಕದಲ್ಲಿದ್ದ ಕಪಾಟಿಗೆ ತಾಗಿ ತಲೆ ಮುಂಭಾಗಕ್ಕೆ ಗಾಯವಾಗಿದೆ .

ಬಾಲಕನ ಹೆತ್ತವರು ಶಾಲಾಭಿವೃದ್ಧಿ ಸಮಿತಿಯ ಗಮನಕ್ಕೂ ತಂದು ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಮಕ್ಕಳ ಸಹಾಯವಾಣಿಗೆ ಮಾಹಿತಿ ರವಾನಿಸಲಾಗಿದೆ. ಪೊಲೀಸರಿಗೂ ಮಾಹಿತಿ ರವಾನೆಯಾಗಿದ್ದು ಪರಿಶೀಲನೆಯ ಬಳಿಕ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಶಿಕ್ಷಕನ ವಿರುದ್ಧ ಹಲವು ಆರೋಪಗಳು ಕೇಳಿ ಬರುತ್ತಿದ್ದು ಪೊಲೀಸರ ವಿಚಾರಣೆಯ ಬಳಿಕ ವಾಸ್ತವ ಸಂಗತಿ ತಿಳಿದು ಬರಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top