ಸುಳ್ಯ: ರಾತ್ರಿಯ ವೇಳೆ ಅರಳಿ ಕಂಪು ಸೂಸುವ ‘ರಾತ್ರಿ ರಾಣಿ’ ಎಂಬ ಹೆಸರು ಗಳಿಸಿರುವ ಬ್ರಹ್ಮ ಕಮಲ ಅರಳಿದ ಹೂ ಪಂಜ , ಕೂತ್ಕೂಂಜ ಗ್ರಾಮದ ಸಂಪ ಶೀನಪ್ಪ ಅವರ ಮನೆಯಲ್ಲಿ ಅರಳಿ ನಿಂತಿದೆ.
ಬ್ರಹ್ಮಕಮಲ ಸುಂದರವಾದ ಹೂವಾಗಿದ್ದು, ಹಿಮಾಲಯದ ತಪ್ಪಲಿನಲ್ಲಿ ಕಂಡುಬರುತ್ತದೆ. ಈ ಪುಷ್ಪಸೂರ್ಯಕಾಂತಿ ಹೂವಿನ ಕುಟುಂಬದ ಸದಸ್ಯ ಎಂದೂ ಹೇಳಲಾಗುತ್ತದೆ.
ಇದು ಪೌರಾಣಿಕ ಮತ್ತು ಧಾರ್ಮಿಕ ಮಹತ್ವಗಳನ್ನು ಹೊಂದಿದೆ. ಸೃಷ್ಟಿಯ ದೇವನಾದ ಬ್ರಹ್ಮನು, ಧ್ಯಾನ ಮಾಡುವಾಗ ಈ ಹೂವಿನ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದನು ಎನ್ನುವ ನಂಬಿಕೆಯಿದೆ. ಈ ಪವಿತ್ರ ಹೂವು ವರ್ಷಕ್ಕೊಮ್ಮೆ ಒಂದು ರಾತ್ರಿ ಮಾತ್ರ ಅರಳುತ್ತದೆ ಎಂಬ ಪ್ರತೀತಿ ಇದೆ.