ಕಡಬ: ದೈಪಿಲ ಕ್ರೀಡಾ ಸಂಘ ಹಾಗೂ ಮೆಸ್ಕಾಂ ವತಿಯಿಂದ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ನಾಣಿಲದಿಂದ ಕಾಪೆಜಾಲು ತನಕ ಶ್ರಮದಾನ ಭಾನುವಾರ ನಡೆಯಿತು.
ದೈಪಿಲ ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ ನೇತೃತ್ವದಲ್ಲಿ ಮೆಸ್ಕಾಂ ಪವರ್ ಮ್ಯಾನ್ ಉಮೇಶ್ ಕೆರೆನಾರು ಅವರ ಮಾರ್ಗದರ್ಶನದಲ್ಲಿ ಸುಮಾರು ಎರಡು ಕಿ.ಮೀ. ವರೆಗೆ ಶ್ರಮದಾನದ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.
ಶ್ರಮದಾನದಲ್ಲಿ ಪವರ್ ಮ್ಯಾನ್ ಮುಕ್ತಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ದೈಪಿಲ ಕ್ರೀಡಾ ಸಂಘದ ಬೆಳಿಯಪ್ಪ ದೇವಸ್ಯ, ಹರೀಶ್, ಹಿತೇಶ್, ಜನಾರ್ದನ ಕೆಳಗಿನಕೇರಿ, ದಿವಿಶ್‍ಖಂಡಿಗ, ಗಣೇಶ್‍ಬಾಕಿಲ, ವಿಶ್ವನಾಥ ಖಂಡಿಗ, ತಾರನಾಥ ಖಂಡಿಗ, ಪ್ರವೀಣ್ ಕುಂಟ್ಯಾಣ, ಹರೀಶ ಕೆಳಗಿನಕೇರಿ, ಸುಂದರ ದೇವಸ್ಯ, ಪುರುಷೋತ್ತಮ ಖಂಡಿಗ ಪಾಲ್ಗೊಂಡಿದ್ದರು.
























