ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಛತ್ತೀಸ್ ಗಢದ ಯುವಕ

ಪುತ್ತೂರು: ಯುವಕನೊಬ್ಬ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರ ಎಂಬಲ್ಲಿ ನಿನ್ನೆ ಬೆಳಕಿಗೆ ಬಂದಿದ್ದು, ಛತ್ತೀಸ್‌ಗಢದ ಮನಮೋಹನದಾಸ್ (24) ಎಂದು ತಿಳಿದು ಬಂದಿದೆ.

ಪ್ರೇಮ ವೈಫಲ್ಯಕ್ಕೆ ಒಳಗಾಗಿ ಮನಮೋಹನದಾಸ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಛತ್ತೀಸ್‌ಗಢದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅವರಿಬ್ಬರ ಮಧ್ಯೆ ವಿರಸ ಉಂಟಾಗಿದ್ದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪ್ರೇಯಸಿಯ ದೂರವಾಣಿಗೆ ಸಂದೇಶ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ ಒಂದು ತಿಂಗಳಿನಿಂದ ಪುತ್ತೂರಿನಲ್ಲಿ ಎಳನೀರು ಕೀಳುವ ತಂಡವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಮೇ 30ರಂದು ರಾತ್ರಿ ಈ ಕೃತ್ಯ ಎಸಗಿದ್ದಾನೆ. ಕಾಸರಗೋಡಿನಲ್ಲಿ ಕೆಲಸ ಮಾಡು ತ್ತಿದ್ದ ಈತ ಒಂದು ತಿಂಗಳ ಹಿಂದೆ ಯಷ್ಟೇ ಪುತ್ತೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top