ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರಿನ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಹೊರತಂದ “ಶಿವಾಮೃತ” ಸಂಚಿಕೆ ಇಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆಯಾಯಿತು.

ಬೆಳಿಗ್ಗೆ ವಿಶೇಷ ಪೂಜೆಯೊಂದಿಗೆ “ಶಿವಾಮೃತ” ಸಂಚಿಕೆಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಚಿದಾನಂದ ಬೈಲಾಡಿ, ಶಿವಾಮೃತದ ಸಂಪಾದಕರೂ, ನಿರ್ದೇಶಕರಾದ ಸೀತಾರಾಮ ಕೇವಳ, ಪ್ರವೀಣ್ ಕುಂಟ್ಯಾಣ, ಸತೀಶ್ ಪಾಂಬಾರು, ವಸಂತ ಎಸ್. ವೀರಮಂಗಲ, ಮುರಳೀಧರ ಕೆ.ಎಲ್. ಕಾರ್ಯನಿರ್ವಾಹಕ ನಿರ್ದೇಶಕರಾದ ನಾಗೇಶ್ ಕೆಡೆಂಜಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ಉಜ್ಜೀವನ್ ಬ್ಯಾಂಕ್ ನ ಕ್ಲಸ್ಟರ್ ಹೆಡ್ ಮುರಳೀ ರೈ, ಸಿಬ್ಬಂದಿಗಳಾದ ಕುಮಾರ್ ಕಲ್ಲಾರೆ, ರಂಜನ್ ಉಪಸ್ಥಿತರಿದ್ದರು.
