ಪುತ್ತೂರು: ಜೂ.3 ಸೋಮವಾರ ನಡೆಯಲಿರುವ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಪದವೀಧರರ ಕ್ಷೇತ್ರದಲ್ಲಿ 2520 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 804 ಮತದಾರರಿದ್ದಾರೆ ಎಂದು ತಹಶೀಲ್ದಾರ್‍ಕುಂಞಿ ಅಹಮ್ಮದ್ ತಿಳಿಸಿದ್ದಾರೆ.
ಅವರು ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈಗಾಗಲೇ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆದಿದ್ದು, ತಾಲೂಕು ಪಂಚಾಯಿತಿಯಲ್ಲಿ ಪದವೀಧರರ ಮೂರು ಮತದಾನ ಕೇಂದ್ರ ಹಾಗೂ ಆಡಳಿತ ಸೌಧದಲ್ಲಿ ಒಂದು ಶಿಕ್ಷಕರ ಮತದಾನ ಕೇಂದ್ರ ಕಾರ್ಯಾಚರಿಸಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ತನಕ ಮತದಾನ ಪ್ರಕ್ರಿಯೆ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಈಗಾಗಲೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಪರವೀಧರ ಕ್ಷೇತ್ರದ ಮತದಾರರಿಗೆ ಬಲಗೈಯ ತೋರುಬೆರಳಿಗೆ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರಿಗೆ ಮಧ್ಯದ ಬೆರಳಿಗೆ ಇಂಕ್‍ಗಳನ್ನು ಹಾಕಲಾಗುವುದು.
ಈಗಾಗಲೇ ಬ್ಯಾಲೆಟ್ ಪೇಪರ್‍ಸ್ಟ್ರಾಂಗ್‍ರೂಮ್‍ನಲ್ಲಿ ಇಡಲಾಗಿದ್ದು, ಮತದಾನ ದಿನದಂದು ಬೂತ್‍ಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿಗೆ ಪಕ್ಷದವರು ಬಂದು ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ ಅವರು, ಚುನಾವಣೆ ನಡೆದ ಬಳಿಕ ಮತಪತ್ರಗಳ ಡಿಮಸ್ಟರಿಂಗ್ ಆಗಿ ಪೊಲೀಸ್ ಬಂದೋಬಸ್ತ್ ಮೂಲಕ ಮೈಸೂರಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆ ಹಿನ್ನಲೆಯಲ್ಲಿ ಜೂ.1 ಸಂಜೆ 4 ಗಂಟೆಯಿಂದ 144 ಸೆಕ್ಷನ್ ಜ್ಯಾರಿ ಮಾಡಲಾಗಿದೆ. ಮತದಾನ ಕೇಂದ್ರದ 200 ಮೀ. ದೂರದಲ್ಲಿ ಬ್ಯಾರಿಕೇಡ್ ಹಾಕಲಾಗುವುದು ಎಂದು ತಿಳಿಸಿದರು.
ಎಲ್ಲರೂ ಶಾಂತಿಯುತ ಮತದಾನಕ್ಕೆ ಪ್ರೋತ್ಸಾಹ ನೀಡಬೇಕು. ಮತದಾನದಿಂದ ಯಾರೂ ಹೊರಗುಳಿಯಬಾರದು. ಚುನಾವಣಾ ಆಯೋಗ ಏನು ನೀಡಿದ ಆದೇಶ ಪಾಲನೆಯೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ತಿಳಿಸಿದರು.
ವೇದಿಕೆಯಲ್ಲಿ ಉಪತಹಶೀಲ್ದಾರ್ ಸುಲೋಚನಾ, ಮಾಸ್ಟರ್ ಟ್ರೈನರ್ ಪ್ರಸನ್ನ ನಾಯಕ್, ಕಂದಾಯ ಇಲಾಖೆಯ ಚಂದ್ರ ನಾಯ್ಕ ಉಪಸ್ಥಿತರಿದ್ದರು.