ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಸ್ಸಿ. ಫ್ಯಾಷನ್ ಡಿಸೈನ್ ಪದವಿಯಲ್ಲಿ ಅಕ್ಷಯ ಕಾಲೇಜು ಪುತ್ತೂರಿನ ವಿದ್ಯಾರ್ಥಿನಿ, ಅಂತರಾಷ್ಟ್ರೀಯ ಯೋಗಪಟು ಪ್ರಣಮ್ಯ ಸಿ.ಎ. ಪ್ರಥಮ ರ್‍ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಅಕ್ಷಯ ಕಾಲೇಜು ಪುತ್ತೂರು ಫ್ಯಾಷನ್ ಡಿಸೈನ್ ಪದವಿಯ ತನ್ನ ಎರಡನೇ ಬ್ಯಾಚಿನಲ್ಲಿ ಈ ಸಾಧನೆ ಮಾಡಿದ್ದು, ಪ್ರಥಮ ಬ್ಯಾಚಿನಲ್ಲೇ ಪ್ರಥಮ ಮತ್ತು ದ್ವಿತೀಯ ರ್‍ಯಾಂಕ್ ಗಳನ್ನು ಗಳಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಜನ ಮೆಚ್ಚುಗೆಗೆ ಪಾತ್ರವಾಗಿರುವ ಪುತ್ತೂರಿನ ಅತ್ಯುತ್ತಮ ಸಂಸ್ಥೆ ಎನಿಸಿಕೊಂಡಿರುವ ಅಕ್ಷಯ ಕಾಲೇಜು ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ನೀಡುತ್ತಿದ್ದು, ತನ್ನ ಎಲ್ಲಾ ಪದವಿಗಳಲ್ಲಿ ಅತ್ಯುತ್ತಮ ಅತ್ಯುನ್ನತ ಶೇ.ನೂರು ಫಲಿತಾಂಶದೊಡನೆ ದಾಖಲೆಯನ್ನು ಸಾಧಿಸಿರುವುದನ್ನು ಗಮನಿಸಬಹುದಾಗಿದೆ.
ಸಂಸ್ಥೆಯಲ್ಲಿ ಈ ಬಾರಿ 2024-25ನೇ ಸಾಲಿನಿಂದ ಬಿ.ಎ. ಪದವಿ ಪ್ರಾರಂಭವಾಗುತ್ತಿದ್ದು, ಈಗಾಗಲೇ ಕಾಲೇಜಿನಲ್ಲಿ ಪ್ಯಾಶನ್ ಡಿಸೈನ್, ಬಿಕಾಂ ವಿತ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಬಿ ಎಸ್ಸಿ ಇಂಟೀರಿಯರ್ ಡಿಸೈನ್ ಅಂಡ್ ಡೆಕೋರೇಷನ್, ಬಿಸಿಎ ವಿತ್ ಸೈಬರ್ ಸೆಕ್ಯೂರಿಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬಿ ಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್, (ಹೋಟೆಲ್ ಮ್ಯಾನೇಜ್ಮೆಂಟ್) ಪದವಿಗಳನ್ನು ನಡೆಸುತ್ತಿದ್ದು, ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಹೆಚ್ಚಿನ ಪದವಿಗಳಲ್ಲಿ ಶೇ. ನೂರರಷ್ಟು ಫಲಿತಾಂಶ ದಾಖಲಿಸಿಕೊಂಡಿದೆ.