ಅಲ್ಪ ಸಂಖ್ಯಾತರು ರಸ್ತೆಯಲ್ಲಿ ನಮಾಜ್ ಮಾಡುವುದಾದರೆ ನಮಗೂ ರಸ್ತೆಯಲ್ಲಿ ಭಜನೆ ಮಾಡಲು ಬರುತ್ತದೆ | ಸರಕಾರಕ್ಕೆ ಎಚ್ಚರಿಕೆ ನೀಡಿದ ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಅಲ್ಪ ಸಂಖ್ಯಾತ ಸಮಾಜದವರು ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕ ಅಶಾಂತಿ ಸೃಷ್ಠಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮಗೂ ಕಾನೂನು ಇದೆ.ನಾವೂ ರಸ್ತೆಯಲ್ಲಿ ಭಜನೆ ಮಾಡುವ ಮೂಲಕ ಉತ್ತರ ಕೊಡಲು ಸಿದ್ಧರಿದ್ದೇವೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನ ಕಂಕನಾಡಿ ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಅಶಾಂತಿ ಸೃಷ್ಠಿದ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ವಯಂಪ್ರೇರಿತ ಕೇಸು ದಾಖಲಿಸಿದ ಪೋಲಿಸ್ ಅಧಿಕಾರಿಯನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿರುವುದನ್ನು ಖಂಡಿಸಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ಇಂದು ಸಂಜೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಕ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮಗೂ ರಸ್ತೆಗಳಿವೆ. ನಾವು ರಸ್ತೆಯಲ್ಲಿ ಭಜನೆ, ಪೂಜೆಗಳನ್ನು ಮಾಡಬೇಕಾದ ದಿನಗಳು ಬರಬಹುದು. ಸರಕಾರ ಇದಕ್ಕೆ ಆಸ್ಪದ ಕೊಡದೆ ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.





























 
 

ಕಾಂಗ್ರೆಸ್ ಸರಕಾರ ಅಲ್ಪ ಸಂಖ್ಯಾತ ತುಷ್ಡಿಕರಣ ಮಾಡುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ನಮಾಜು ಮಾಡಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದರೆ ಅವರನ್ನು ರಜೆಯಲ್ಲಿ ಕಳಿಸುವ ಮೂಲಕ ಹಿಂದುಗಳು ಮತ್ತು ಮುಸಲ್ಮಾರಿಗೆ ಪ್ರತ್ಯೇಕ ಕಾನೂನಿನ ಸಂದೇಶ ನೀಡುತ್ತಿದೆ. ಇದರ ವಿರುದ್ಧ ಜನರು ದಂಗೆ ಏಳುವ ಮೊದಲು ಸರಕಾರ ಎಚ್ಚೆತ್ತಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಸರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡದಿದ್ದರೆ ಮುಂದೆ ಅದಕ್ಕೆ ಬೆಲೆ ಕಟ್ಟ ಬೇಕಾದ ದಿನ ಬರಬಹುದು. ಘಟನೆಯನ್ನು ಪ್ರಶ್ನಿಸಿದ ಶರಣ್ ಪಂಪ್‌ವೆಲ್ ಮೇಲೆ ಕೇಸು ದಾಖಲಿಸುವುದಾದರೆ ಅಂತಹ ಸಾವಿರ ಮಂದಿಯ ಹೆಸರು ಕೊಡುತ್ತೇವೆ. ಕೇಸು ದಾಖಲಿಸಲಿ ಅಥವಾ ಗಡಿಪಾರು ಮಾಡಲಿ. ಅಲ್ಪ ಸಂಖ್ಯಾತರಿಗೊಂದು ಹಿಂದುಗಳಿಗೊಂದು ಕಾನೂನು ಮಾಡಿದರೆ ಆಗುವ ಸಂಘರ್ಷಕ್ಕೆ ನೀವೇ ಹೊಣೆಯಾಗಲಿದ್ದೀರಿ ಎಂದು ಎಚ್ಚರಿಕೆ ನೀಡಿದರು.

ವಿಶ್ವಹಿಂದು ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಹಿಂದುಗಳಿಗೊಂದು ಅಲ್ಪಸಂಖ್ಯಾತರಿಗೊಂದು ಪ್ರತ್ಯೇಕ ಕಾನೂನು ಮಾಡುತ್ತಿದೆ. ಕಾನೂನಿನ ಮೂಲಕ ಸಾಮರಸ್ಯ ಮೂಸಬೇಕಾದ ಸರಕಾರ ಕಾನೂನಿಗೆ ವಿರುದ್ದ ಹೋಗುವವರನ್ನು ರಕ್ಷಣೆ ಮಾಡುತ್ತಿದೆ. ಸರಕಾರ ಇಂತಹ ಕ್ರಮವನ್ನು ಖಂಡಿಸಿ, ಸರಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತಿದ್ದೇವೆ ಎಂದರು.

ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಂಡೇಲು, ಉಪಾಧ್ಯಕ್ಷ ಸತೀಶ್, ಜಯಂತ ಕುಂಜೂರುಪಂಜ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top