ವಿದ್ಯುತ್ ಲೈನ್ ದುರಸ್ತಿ ವೇಳೆ ಕಿಡಿಗೇಡಿಯಿಂದ ಲೈನ್ ಆನ್ ಮಾಡಲು ಯತ್ನ | ಮುಚ್ಚಳಿಕೆ ಬರೆಸಿದ ಪೊಲೀಸರು.

ಪಂಜ: ವಿದ್ಯುತ್ ಲೈನ್ ದುರಸ್ತಿ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಲೈನ್ ಆನ್ ಮಾಡಲು ಯತ್ನಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದ ಘಟನೆ ಕರಿಕ್ಕಳದಲ್ಲಿ ನಡೆದಿದೆ.

ಪಂಜದ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಕರಿಕ್ಕಳ ಸಮೀಪ ವಿದ್ಯುತ್ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲನ್ನು ತೆಗೆಯಲೆಂದು ಜೆ.ಒ.ಸಿ ಆನ್ ಮಾಡಿ ಯಾರು ಆಫ್ ಮಾಡದಂತೆ ಅದನ್ನು ತಂತಿಯಲ್ಲಿ ಕಟ್ಟಿ ಕೆಲವು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು.

ಇದೇ ವೇಳೆ ಅಲ್ಲಿಯೇ ಸಮೀಪದಲ್ಲಿ ರೂಮ್ ನಲ್ಲಿರುವ ರಬ್ಬರ್ ಟ್ಯಾಪರ್ ಆಗಿರುವ ರಾಜೇಶ್ ಎಂಬತ ಜೆ.ಒ.ಸಿ ಆಫ್ ಮಾಡಿ ಲೈನ್ ಚಾರ್ಜ್ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಜೆ.ಒ.ಸಿ ಉಪಕರಣದ ಬೊಲ್ಸ್ ತುಂಡಾಗಿ ವಿದ್ಯುತ್ ಪ್ರವಾಹಿಸಲು ಕೆಲವು ಇಂಚು ಅಂತರ ಬಾಕಿ ಉಳಿದ ಕಾರಣ ಭಾರಿ ದುರಂತವೊಂದು ತಪ್ಪಿದೆ.



































 
 

ಇದು ಮೆಸ್ಕಾಂ ಸಿಬ್ಬಂದಿಗಳ ವಿಚಾರ ಗಮನಕ್ಕೆ ಬಂದಿದೆ. ಬಳಿಕ ಸಮೀಪದ ಸಿ.ಸಿ ಕ್ಯಾಮರದಲ್ಲಿ ಪರಿಶೀಲಿಸಿದಾಗ ಕಿಡಿಗೇಡಿ ಯುವಕ ಈ ಕೃತ್ಯ ಎಸಗಿದ್ದು ಕಂಡು ಬಂದಿದೆ. ಬಳಿಕ ಆರೋಪಿ ರಾಜೇಶ್ ನನ್ನು ಸುಬ್ರಹ್ಮಣ್ಯ ಪೋಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ ಬಿಟ್ಟಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top