ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್‌ಮೆಂಟ್ ಐಟಿ ಫೆಸ್ಟ್ ವಿಶನ್-24 ಸ್ಪರ್ಧೆಗಳಿಗೆ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಅನುಭವಗಳು ಜೀವನದಲ್ಲಿ ಹೆಚ್ಚಿನ ಪಾಠ ಕಲಿಸುತ್ತವೆ. ನಮ್ಮನ್ನು ಕೆಣಕುವವರು, ಟೀಕಿಸುವವರು ಸಮಾಜದಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಟೀಕೆ ಟಿಪ್ಪಣಿಗಳನ್ನು ನಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದಕ್ಕೆ ಮಾತ್ರವೇ ಬಳಸಿಕೊಳ್ಳಬೇಕು ಎಂದರು.
ಗಣಕವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ 2012 ರಿಂದ ವಿಶನ್ ಇಂಟ್ರಾ ಡಿಪಾರ್ಟ್‌ಮೆಂಟ್ ಐಟಿ ಫೆಸ್ಟ್ ಆಯೋಜಿಸಲಾಗುತ್ತಿದ್ದು ನಿಗದಿತ ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕೌಶಲ್ಯವರ್ಧನೆಗಾಗಿ ಈ ಫೆಸ್ಟ್‌ನ್ನು ಆಯೋಜಿಸುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ಸಂಯೋಜಕಿ ಸೌಮ್ಯ, ಉಪಾಧ್ಯಕ್ಷ ಆದಿತ್ಯ ದಿನೇಶ್, ಕಾರ್ಯದರ್ಶಿ ಫರ್ವೇಜ್ ಅಕ್ತರ್ ಉಪಸ್ಥಿತರಿದ್ದರು. ದಿಶಾ ಮತ್ತು ಬಳಗದವರು ಪ್ರಾರ್ಥಿಸಿದರು. ಪಿನ್ಯಾಕಲ್ ಐಟಿ ಕ್ಲಬ್ ಅಧ್ಯಕ್ಷ ಅಭಿಷೇಕ್ ಕಾಮತ್ ಸ್ವಾಗತಿಸಿದರು. ನಿತಿಸ್ ಸೈಮನ್ ವಂದಿಸಿದರು. ಸಮೃದ್ಧಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಪಿನ್ಯಾಕಲ್ ಐಟಿ ಕ್ಲಬ್‌ನ ವಿಶನ್ 2024ರಲ್ಲಿ ಡಾಕ್ಯುಮೆಂಟರಿ, ಪೇಪರ್ ಪ್ರೆಸೆಂಟೇಶನ್, ಕೊಲ್ಯಾಜ್ ಮೇಕಿಂಗ್, ಐಡಿಯೇಶನ್, ಕೋಡ್ ವಾರ್, ಹ್ಯಾಕಥಾನ್, ವೆಬ್ ಸೈಟ್ ಡಿಜೈನ್, ಫೋಟೋಗ್ರಫಿ, ರೆಮಿನಿಸೆನ್ಸ್, ಐಒಟಿ ಮೋಡೆಲ್ ಡಿಸೈನ್, ಬ್ರೇಕ್ ದ ಕ್ವೆರಿ, ಐಟಿ ಮ್ಯಾನೇಜರ್, ಗ್ರೂಪ್ ಡ್ಯಾನ್ಸ್, ಫ್ಯಾಶನ್ ಶೋ, ಇ-ಗಾಮ್ಸ್ ಸೇರಿದಂತೆ 15 ಸ್ಪರ್ಧೆಗಳನ್ನು ಒಳಗೊಂಡಿದೆ.