ಪುತ್ತೂರು: ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಲಲಿತಾ ಆರ್ ರೈ ಅವರಿಗೆ ಎಸ್‍ಸಿಐ ಪುತ್ತೂರು ಲಿಜನ್ ವತಿಯಿಂದ ಗೌರವಾರ್ಪಣೆ ನಡೆಯಿತು.

ಸಾಹಿತ್ಯ ಪ್ರಿಯೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್(ಎಸ್.ಸಿ.ಐ.) ಅವರ ತೊಂಬತ್ತಾರರ ಇಳಿ ಹರೆಯದ ಹೊತ್ತಲ್ಲಿ ಲಲಿತಾ ಆರ್. ರೈ ಅವರನ್ನು ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ತಮ್ಮ SCI ಪುತ್ತೂರು ತಂಡದೊಂದಿಗೆ ಶಾಲು, ಹಣ್ಣು ಹಂಪಲು ಹಾಗೂ ಪುಸ್ತಕವನ್ನು ನೀಡಿ ಸ್ವಗೃಹದಲ್ಲಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಲಲಿತಾ ಆರ್ ರೈ ಯವರ ಕಿರಿಯ ಪುತ್ರಿ ಕೃಪಾ ಉಪಸ್ಥಿತರಿದ್ದರು.
ಚಿತ್ತಗಾಂಗಿನ ಕ್ರಾಂತಿವೀರರು( ಅನುವಾದ)1949, ಮತ್ತೆ ಬೆಳಗಿತು ಸೊಡರು ( ಕಥಾ ಸಂಕಲನ ) 2005, ಇಂಟರ್ನೆಟ್ಟಿನ ಒಳಗೆ ಮತ್ತು ಇತರ ಕಥೆಗಳು ( ಕಥಾ ಸಂಕಲನ )2007, ಸೌಪರ್ಣಿಕ ಕಡತ್ ದ್ ವೈತರಣಿಗ್ ( ತುಳು ಕಥಾ ಸಂಕಲನ )2007, ದೇಸಾoತರ(ತುಳು ಕಾದಂಬರಿ)2009, ಬೋಂಟೆ ದೇರ್oಡ್ (ತುಳು ಕಾದಂಬರಿ )2011, ಗ್ರಹಣ ಕಳೆಯಿತು (ಕಥಾ ಸಂಕಲನ )2013, ಇವೆಲ್ಲದರ ಬರಹಗಾರ್ತಿ ಯಾಗಿದ್ದರು.