ಪುತ್ತೂರು: ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರ್ಯಾಂಕ್ ಗೆ ಭಾಜನರಾಗಿದ್ದಾರೆ.
ಬಿ.ಎಸ್ಸಿ ವಿಭಾಗದಲ್ಲಿ ಪೆರ್ಲದ ಪಡ್ರೆ ನಿವಾಸಿಗಳಾದ ಬಾಲಚಂದ್ರ ಬಿ.ವಿ ಹಾಗೂ ಪ್ರಿಯಾ ವಿ ದಂಪತಿ ಪುತ್ರಿ ವರೇಣ್ಯಾ ಒಟ್ಟು 4200 ಅಂಕಗಳಲ್ಲಿ 4093 ಅಂಕ ಗಳಿಸಿ 97.45 ಶೇ. ದೊಂದಿಗೆ ಮೂರನೇ ರ್ಯಾಂಕ್ ಗಳಿಸಿದ್ದಾರೆ. ಬಿ.ಎ ವಿಭಾಗದಲ್ಲಿ ಪುತ್ತೂರಿನ ವಾಲ್ತಾಜೆ ನಿವಾಸಿ ಸತ್ಯನಾರಾಯಣ ಭಟ್ ಹಾಗೂ ವಿನಯಾ ದಂಪತಿ ಪುತ್ರಿ ನಯನಾ ಒಟ್ಟು 3814 ಅಂಕ ಗಳಿಸಿ 90.81 ಶೇ. ಅಂಕಗಳೊಂದಿಗೆ ಮೂರನೇ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಅಭಿನಂದನೆ ಸಲ್ಲಿಸಿದ್ದಾರೆ.