ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ನ್ಯಾಯವಾದಿಗಳು

ಇಂದೋರ್: ನ್ಯಾಯಾಧೀಶರ ಮೇಲೆ ಚಪ್ಪಲಿ ಹಾರ ಎಸೆದ ವ್ಯಕ್ತಿಯೊಬ್ಬನನ್ನು ನ್ಯಾಯವಾದಿಗಳು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದೋರ್ ನಲ್ಲಿ ನಡೆದಿದೆ.

ಮಹಮ್ಮದ್ ನಲಿಂ ಎಂಬಾತ  ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದವನು.

ಈ ಘಟನೆಯ ನಂತರ ನ್ಯಾಯಾಲಯದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ವಿಚಿತ್ರವೆಂದರೆ ಈ ನ್ಯಾಯಾಲಯದಲ್ಲಿ ಈ ಹಿಂದೆಯು ಕೂಡ ಈ ರೀತಿಯ ಘಟನೆಗಳು ನಡೆದಿದ್ದವು. ಪೊಲೀಸರು ಕೂಡಾ ಯಾಕೆ ಜಾಗರೂಕರಾಗುತ್ತಿಲ್ಲ ಎಂಬುದು ಪ್ರಶ್ನೆ ಉದ್ಭವಿಸಿದೆ.





























 
 

ಈ ನ್ಯಾಯಾಲಯದಲ್ಲಿ ಇಬ್ಬರು ಮೌಲ್ವಿಗಳ  ವಿರುದ್ಧದ ಒಂದು ಮೊಕದ್ದಮೆಯ ತೀರ್ಪು ಬರಬೇಕಿತ್ತು. ಯಾವ ನ್ಯಾಯಾಧೀಶರು ತೀರ್ಪು ನೀಡುವವರಿದ್ದರು, ಅವರ ಮೇಲೆಯೇ ಚಪ್ಪಲಿಯ ಹಾರ ಎಸೆಯಲಾಯಿತು. ಸಲೀಂ ತನ್ನ ಮನೆಯಿಂದ ಚಪ್ಪಲಿಯ ಹಾರ ತಂದಿದ್ದನು. ಈ ಹಾರ ತಂದಿರುವ ವಿಷಯ ರಕ್ಷಣಾ ಸಿಬ್ಬಂದಿ. ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಗಳ ಗಮನಕ್ಕೆ ಯಾಕೆ ಬರಲಿಲ್ಲ ಎಂದು ಅಲ್ಲಿದ್ದವರ ಪ್ರಶ್ನೆ. ನ್ಯಾಯಾಲಯದಲ್ಲಿ ಸುರಕ್ಷತೆ ಶೂನ್ಯ ! ಚಪ್ಪಲಿಯ ಜಾಗದಲ್ಲಿ ಆಘಾತಕಾರಿ ಶಸ್ತ್ರ ಇದ್ದಿದ್ದರೆ ಏನಾಗಬಹುದಾಗಿತ್ತು? ಈ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top