ಹೊಸದಿಲ್ಲಿ : ಲೋಕಸಭಾ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಮೋದಿ ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ.
ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದ್ದು ಈಗಾಗಲೇ ಸ್ಥಳದಲ್ಲಿ ಮೋದಿಗೆ ಭದ್ರತೆ ನೀಡುವ ಎಸ್‌ಪಿಜಿ ತಂಡ ಬಿಡುಬಿಟ್ಟಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ. ಜೂನ್ 30ರ ಸಂಜೆ 4.45ಕ್ಕೆ ಪ್ರಧಾನಿ ಮೋದಿ ಧ್ಯಾನ ಕೇಂದ್ರಕ್ಕೆ ಆಗಮಿಸಲಿದ್ದಾರೆ. 2019ರಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಮೋದಿ ಕೇದಾರನಾಥದಲ್ಲಿ ಧ್ಯಾನ ಮಾಡಿದ್ದರು.
1892ರ ಡಿಸೆಂಬರ್ 23, 24, 25 ಸ್ವಾಮಿ ವಿವೇಕಾನಂದರು ಇದೇ ಜಾಗದಲ್ಲಿ ಧ್ಯಾನಕ್ಕೆ ಕೂತಿದ್ದರು. ಈ ಕಾರಣಕ್ಕೆ 1970ರಲ್ಲಿ ಇದೇ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು.