ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್| 1.5 ಕೋಟಿ ರೂ. ಕಳೆದುಕೊಂಡ ಕಡಬದ ವ್ಯಕ್ತಿ : ಪ್ರಕರಣ ದಾಖಲು

ಕಡಬ : ಅಪರಿಚಿತ ವ್ಯಕ್ತಿಯ ಸೂಚನೆಯಂತೆ ಕ್ರಿಪ್ಪೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ಕಡಬದ ವ್ಯಕ್ತಿಯೋರ್ವರು 1 ಕೋಟಿ 5 ಲಕ್ಷ ರೂ. ಗಳನ್ನು ಕಳೆದುಕೊಂಡಿರುವ ಘಟನೆ ಇಚಿಲಂಪಾಡಿಯಿಂದ ವರದಿಯಾಗಿದೆ.

ಕಡಬ ತಾಲೂಕಿನ ಇಚಿಲಂಪಾಡಿ ನಿವಾಸಿ ಸಜಿ ಎಂಬವರು ಕ್ರಿಪ್ಪೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ಟೆಲಿಗ್ರಾಂ ಮೂಲಕ ಅಪರಿಚಿತ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದು, ಆತನ ಸೂಚನೆಯಂತೆ Binance app ಮತ್ತು Defi app ಇನ್‌ಸ್ಟಾಲ್ ಮಾಡಿದ್ದ. ಬಳಿಕ ಈ ಆ್ಯಪ್ ಗಳ ಮೂಲಕ ಟ್ರೇಡಿಂಗ್ ಮಾಡಲು ಹೊರಟಿದ್ದಾರೆ. ಟ್ರೇಡಿಂಗ್ ಮಾಡಿತ್ತಿದ್ದಂತೆ ತನ್ನ ಖಾತೆಯಿಂದ ಒಟ್ಟು 1,05,79,711 ರೂ.ಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಇದೀಗ ಮೋಸ ಹೋದ ಸಜಿ ನೀಡಿದ ದೂರಿನಂತೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top