ಪುತ್ತೂರು: ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಮುಂದಿನ ಎರಡು ವರ್ಷ ಅವಧಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಸಮಿತಿ ರಚಿಸಲಾಯಿತು.
ನೂತನ ಅದ್ಯಕ್ಷರಾಗಿ ಮೊಹಮ್ಮದ್ ರಫೀಕ್ ದರ್ಬೆ, ಉಪಾದ್ಯಕ್ಷರಾಗಿ ರೋಹಿಣಿ ರಾಘವ, ಕಾರ್ಯದರ್ಶಿಯಾಗಿ ಸುಮಂಗಳಾ ಶೆಣೈ, ಜೊತೆ ಕಾರ್ಯದರ್ಶಿಯಾಗಿ ಆರ್ಲಪದವು ಅಬೂಬಕ್ಕರ್, ಕೋಶಾಧಿಕಾರಿಯಾಗಿ ವತ್ಸಲಾ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮುರ, ಕಾರ್ಯಕಾರಿ ಸಮೀತಿ ಸದಸ್ಯರಾಗಿ, ಹರಿಣಾಕ್ಷಿ ಶೆಟ್ಟಿ, ಇಸ್ಮಾಯಿಲ್ ನೆಲ್ಯಾಡಿ, ಪ್ರೇಮಲತಾ ಬನ್ನೂರು, ಸುಚಿತ್ರಾ, ಅಂಬಿಕಾ, ಶಾರದಾ ಅರಸ್, ಪೂರ್ಣಿಮಾ ಮಲ್ಯ ಆಯ್ಕೆಯಾದರು.
ಸಲಹಾ ಸಮೀತಿಗೆ ಕಸ್ತೂರಿ ಬೊಳುವಾರ್, ನಯನಾ ರೈ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ನೋಟರಿ ವಕೀಲೆ ಸಾಹಿರಾ ಜುಬೈರ್ ಅವರನ್ನು ಆಯ್ಕೆ ಮಾಡಲಾಯಿತು,
ಶಿಕ್ಷಣ ಸಂಪನ್ಮೂಲ ಒಕ್ಕೂಟದ ಪ್ರತಿನಿಧಿಯಾಗಿ ನಾರಾಯಣ ಕಿಲಂಗೊಡಿ ಆಗಮಿಸಿದ್ದರು.