ಉದ್ಯೋಗಾಕಾಂಕ್ಷಿಗಳಿಗೆ ಪುತ್ತೂರು ಶಾಸಕರ ಟ್ರಸ್ಟ್ ಮೂಲಕ ನೇರ ನೇಮಕಾತಿ | ಯುವಕ, ಯುವತಿಯರಿಂದ 2500 ಹುದ್ದೆಗೆ ಅರ್ಜಿ ಆಹ್ವಾನ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕಂಪೆನಿಯೊಂದಕ್ಕೆ 2000 ಮಹಿಳಾ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಿದೆ.

ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ವ್ಯಾಪ್ತಿಯ ಉದ್ಯೋಗಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಂಪೆನಿಯು ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಉತ್ತಮ ವೇತನವನ್ನು ನೀಡಲಿದೆ.

ವಿದ್ಯಾರ್ಹತೆ; ಎಸ್‌ಎಸ್‌ಎಲ್‌ಸಿ ಯಿಂದ ಪದವಿ ತನಕ ವ್ಯಾಸಂಗ ಮಾಡಿರುವ 18 ರಿಂದ 26 ವರ್ಷದ ವಯೋಮಾನದ 2000 ಮಹಿಳಾ ಹಾಗೂ 500 ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.































 
 

ಅರ್ಜಿಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ನಾಲ್ಕು ಫೋಟೋ, ಆಧಾರ್ ಕಾರ್ಡು, ಪಾನ್ ಕಾರ್ಡು ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಸಹಿತ ತರಬೇತಿ ಕಾರ್ಯವೂ ನಡೆಯಲಿದೆ.

ಪುರುಷರಿಗೆ

ಐಟಿಐ, ವೆಲ್ಡರ್ ಹಾಗೂ ಟೆಕ್ನಿಷಿಯನ್ ಪುರುಷ ಅಭ್ಯರ್ಥಿಗಳಿಗೂ ಕಂಪೆನಿಯಲ್ಲಿ ಉದ್ಯೋಗವಕಾಶವಿದ್ದು, ವಿದ್ಯಾವಂತ ಉದ್ಯೋಗಾಕಾಂಕ್ಷಿಗಳು ಇದರ ಪ್ರಯೋಜನವವನ್ನು ಪಡೆದುಕೊಳ್ಳುವಂತೆ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಟ್ರಸ್ಟ್ ಕಚೇರಿಯಲ್ಲಿ ಅರ್ಜಿ ಸ್ವೀಕಾರ :

ಅಭ್ಯರ್ಥಿಗಳು ಪೂರ್ಣ ಮಾಹಿತಿಯನ್ನೊಳಗೊಂಡ ಅರ್ಜಿಯನ್ನು ರೈ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಟ್ರಸ್ಟ್ ಕಚೇರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top