5, 8 ಹಾಗೂ 9 ನೇ ತರಗತಿಯವರಿಗೆ ಪಬ್ಲಿಕ್ ಪರೀಕ್ಷೆ ಈ ಶೈಕ್ಷಣಿಕ ವರ್ಷಕ್ಕೂ ಮುಂದುವರಿಕೆ

ಬೆಂಗಳೂರು: 2023-24 ರಲ್ಲಿ 5,8 ಹಾಗೂ 9 ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡಿದ ವಿಚಾರ ವಿವಾದ ಶುರು ಮಾಡಿತ್ತು. ಆದರೂ ಈ ಬಾರಿ ಕೂಡಾ ಅಂದರೆ 2024-25 ನೇ ಶೈಕ್ಷಣಿಕ ಸಾಲಿನಲ್ಲಿ 5,8 ಹಾಗೂ 9 ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಮೌಲ್ಯಾಂಕನ ಪರೀಕ್ಷೆ-1, ಮಾರ್ಚ್‌ನಲ್ಲಿ ಮೌಲ್ಯಾಂಕನ ಪರೀಕ್ಷೆ -2 ಮಾಡಲಾಗುವುದು. ನಂತರ ಎಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳುವುದು ಎಂದು ಹೇಳಲಾಗಿದೆ.

2023-24 ರ 5,8 ಹಾಗೂ 9 ರ ಫಲಿತಾಂಶ ಪ್ರಕಟಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಇದು ಕೋರ್ಟ್‌ನಲ್ಲಿದ್ದರೂ ಕೂಡಾ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top