ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಡಾ. ಶ್ರೀಶ ಭಟ್, ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಕುರಿತು ಮಾಹಿತಿ ನೀಡಿ, ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳ ರೆಸ್ಯೂಮ್ ಹೇಗಿರಬೇಕು, ಯಾವೆಲ್ಲ ವಿಷಯಗಳನ್ನು ಒಳಗೊಂಡಿರಬೇಕು, ವಿದ್ಯಾರ್ಥಿಗಳು ಮಾಡುವಂತಹ ತಪ್ಪುಗಳು, ಇವುಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಹೊಸ ಮಾದರಿಯ ರೆಸ್ಯೂಮ್ ತಯಾರಿಸಲು ಸಹಾಯ ಮಾಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಸಾಫ್ಟ್ ವೇರ್ ಇಂಜಿನಿಯರ್ ಅವಿನಾಶ್ ವಿ.ಕೆ., ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಗೆ ಬೇಕಿರುವಂತಹ ತಯಾರಿ ಹಾಗೂ ಅದನ್ನು ಎದುರಿಸುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿದರು.
ಕಾರ್ಯಾಗಾರದಲ್ಲಿ ಸುಮಾರು 70 ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.
ಅಂತಿಮ ಫ್ಯಾಶನ್ ಡಿಸೈನ್ ಪದವಿ ವಿದ್ಯಾರ್ಥಿಗಳಾದ ಶ್ರದ್ಧಾ, ಸ್ಮಿತಾ ಪ್ರಾರ್ಥಿಸಿದರು. ಅಂತಿಮ ಬಿಕಾಂ ಪದವಿ ವಿದ್ಯಾರ್ಥಿ ಮಹಮದ್ ಮುಸ್ತಫ ಬಿ.ಎ. ಸ್ವಾಗತಿಸಿ, ಅಂತಿಮ ಇಂಟೀರಿಯರ್ ಡಿಸೈನ್ ಪದವಿ ವಿದ್ಯಾರ್ಥಿನಿ ರಿಯಾ ಪೊನ್ನಮ್ಮ ವಂದಿಸಿದರು. ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.