ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಿರ್ಮಿಸಿದ ಮನೆ ‘ಸೇವಾಶ್ರಯ’ದ ಹಸ್ತಾಂತರ

ಸುಳ್ಯ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯಿತಿ ಸಹಕಾರದಲ್ಲಿ ಸುಳ್ಯದ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ‘ಸೇವಾಶ್ರಯ’ದ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ,  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಪನೆಯಂತೆ ಸೇವೆ ಎಂಬ ಯಜ್ಞದಲ್ಲಿ ಸವಿದೆಯಂತೆ ಉರಿದು ಸಮಾಜದಲ್ಲಿ  ಮತ್ತೊಬ್ಬರಿಗೆ ಸಹಾಯ ಮಾಡುವುದೇ  ನಮ್ಮ ಜೀವನದ ಭಾಗವಾಗಿರಬೇಕು. ಈ ಮೂಲಕ ನಮ್ಮ ಜೀವನ ಸಾರ್ಥಕವಾಗಿಸಬೇಕು ಎಂದರು.

ಸೇವೆಯ ಕಲ್ಪನೆಯ ಮೂಲಕ ಕಷ್ಟದಲ್ಲಿ ಇರುವವರಿಗೆ ಸಹಾಯ ನೀಡಬೇಕೆಂಬ ಕಾರಣದಿಂದ ಎಲ್ಲರ ಸಹಕಾರದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಅಶಕ್ತರ, ಶೋಷಿತರ ಪರವಾಗಿ ನಿಂತು ಅವರ ಸಂತೋಷ ನಮ್ಮ ಸಂತೋಷ ಎಂದು ತಿಳಿದು ಸೇವೆ ಮಾಡಿದಾಗ ಬದುಕಿನಲ್ಲಿ ನೆಮ್ಮದಿಯನ್ನು ದೊರೆಯಲು ಸಾಧ್ಯ ಈ ರೀತಿಯ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ಮನುಷ್ಯತ್ವ, ಹೃದಯ ಶ್ರೀಮಂತಿಕೆ ಎಲ್ಲರಲ್ಲಿ ಇರಲಿ, ಆ ಮೂಲಕ ಹಿರಿಯರ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು.































 
 

ಮನೆಯ ಕೀಯನ್ನು ಹಸ್ತಾಂತರ ಮಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್‌.ಎನ್.ಮನ್ಮಥ ಮಾತನಾಡಿ, ಒಂದು ಸೂರು ನಿರ್ಮಿಸಿ ಕೊಟ್ಟ ಪುತ್ತಿಲ ಪರಿವಾರದ ಸೇವೆ ಐತಿಹಾಸಿಕವಾದುದು. ಕಷ್ಟದಲ್ಲಿ ಇರುವವರಿಗೆ ಸಹಾಯ, ಸಹಕಾರ ನೀಡಬೇಕು. ಎಲ್ಲರಿಗೂ ಸ್ಫೂರ್ತಿ ನೀಡುವ  ಕಾರ್ಯಕ್ರಮ ಇದು ಎಂದರು.

ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ ,ಮನೆ ನಿರ್ಮಿಸಿ ಕೊಟ್ಟಿರುವುದು ಒಂದು ದೇವಸ್ಥಾನ ನಿರ್ಮಿಸಿದಂತೆ ಪವಿತ್ರವಾದ ಕೆಲಸ ಎಂದರು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಸುಳ್ಯ ನಗರ ಪಂಚಾಯಿತಿ ಸದಸ್ಯ ಶರೀಫ್‌ಕಂಠಿ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮಾತನಾಡಿದರು.

ಪ್ರಮುಖರಾದ ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಡಾ.ಸಾಯಿರಾಂ,  ಪುತ್ತಿಲ ಪರಿವಾರ ನಗರ ಸೇವಾ ಟ್ರಸ್ಟ್ ನ  ಅಧ್ಯಕ್ಷ ಅನಿಲ್  ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾರ್ಯದರ್ಶಿ ರವಿಕುಮಾರ್  ರೈ ತಿಂಗಳಾಡಿ  ಅತಿಥಿಗಳಾಗಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top