ಪುತ್ತೂರು: ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ 2024-25ನೇ ಸಾಲಿನ ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಆರ್ಥಿಕ ರಕ್ಷಣೆ ನೀಡುತ್ತಾ ಬಂದಿದೆ. ಪ್ರಕೃತ ಹಂಗಾಮು ಮುಂಗಾರಿಗೆ ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜೂನ್ ತಿಂಗಳಲ್ಲಿ ರೈತರ ವಿಮೆ ಪ್ರೀಮಿಯಂ ಕಂತು ಕಟ್ಟಲು ಆದೇಶ ಮಾಡುತ್ತಿತ್ತು. ಪಕ್ಕದ ಕೇರಳ ಸರಕಾರ ಈಗಾಗಲೇ ಹಂಗಾಮು ಮುಂಗಾರು ರೈತರಿಗೆ ವಿಮೆ ಪ್ರೀಮಿಯಂ ಕಂತು ಕಟ್ಟಲು ಆದೇಶ ಮಾಡಿದೆ. ಆದರೆ ಕರ್ನಾಟಕ ಸರಕಾರ ಇನ್ನೂ ಆದೇಶ ಮಾಡದೇ ಇರುವುದರಿಂದ, ದಕ್ಷಿಣ ಕನ್ನಡದಲ್ಲಿ ಈಗಾಗಲೇ ಮಳೆ ಆರಂಭವಾಗಿರುವುದರಿಂದ ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಕೃಷಿಕರು ಬೆಳೆ ರಕ್ಷಣೆ ಬಗ್ಗೆ ಆತಂಕರಾಗಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಜೂನ್ ತಿಂಗಳಲ್ಲಿ ಫಸಲ್ ವಿಮೆ ಹಾಗೂ ಹಾವಾಮಾನ ಆಧಾರಿತ ವಿಮೆಯ ಪ್ರೀಮಿಯಂ ಕಂತು ಕಟ್ಟಲು ಶೀಘ್ರ ಆದೇಶ ಮಾಡಿ ಜೂನ್ ತಿಂಗಳಲ್ಲೇ ಯೋಜನೆಯ ಪ್ರತಿಫಲ ಕೃಷಿಕರಿಗೆ ದೊರೆಯುವಂತೆ ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.