ಪುತ್ತೂರು: ಹಲಸಿನ ಹಣ್ಣಿನ ಉದ್ದಿಮೆಗಳನ್ನು ನಡೆಸುವ ನಿಟ್ಟಿನಲ್ಲಿ ಸಾಧ್ಯತೆಗಳು ಬಹಳಷ್ಟಿವೆ. ಇದಕ್ಕೆ ಉದ್ಯಮಶೀಲತೆಯ ಜತೆಗೆ ಪ್ರಯತ್ನಶೀಲತೆ ಬೇಕಾಗಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅಭಿಪ್ರಾಯಪಟ್ಟರು.
ಅವರು ಪುತ್ತೂರು ನವತೇಜ, ಜೆಸಿಐ, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಅಡಿಕೆ ಪತ್ರಿಕೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಜೈನಭವನದಲ್ಲಿ ನಡೆದ ಹಲಸು ಮತ್ತು ಹಣ್ಣು ಮೇಳದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಹಲಸಿನ ಹಣ್ಣಿನ ಪೂರೈಕೆಯಲ್ಲಿ ತ್ರಿಪುರ ಪ್ರಥಮ ಸ್ಥಾನವಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನವಿದೆ. ಆದರೆ ಹಲಸಿಹಣ್ಣಿನ ಉತ್ಪನ್ನಗಳ ತಯಾರಿಕೆಯಲ್ಲಿ ಕೇರಳ ಮುಂಚೂಣಿಯಲ್ಲಿದೆ. ಅಲ್ಲದೆ ಕೇರಳ ರಾಜ್ಯ ಕಾಯಿ ಸೋಳೆಗಳನ್ನು ರಫ್ತು ಮಾಡುವಲ್ಲಿ ಏಕಮಾತ್ರ ರಾಜ್ಯವಾಗಿದೆ ಎಂದ ಅವರು, ಹಲಸಿನಹಣ್ಣಿಗೆ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದ್ದು, ಮಹಿಳೆಯರು ಉದ್ಯಮವಾಗಿ ತೊಡಗಿಸಿಕೊಳ್ಳುವಲ್ಲಿ ಆಸಕ್ತಿ ವಹಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸುದ್ದಿ ಸಮೂಹ ಸಂಸ್ಥೆಯ ಯು.ಪಿ.ಶಿವಾನಂದ, ಜೆಸಿಐಯ ಶಂಕರ್, ಮೋಹನ್, ಪಂಜಿಗುಡ್ಡೆ ಈಶ್ವರ ಭಟ್, ನವತೇಜದ ಅನಂತ ಕುಮಾರ ನೈತಡ್ಕ ಉಪಸ್ಥಿತರಿದ್ದರು.
ಜೆಸಿಐ ಮಾಜಿ ಅಧ್ಯಕ್ಷ ವೇಣುಗೋಪಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನವತೇಜದ ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ವಂದಿಸಿದರು.