ಟ್ರಕ್-ಕಾರು ಭೀಕರ ಅಪಘಾತ : ಐವರು ಸ್ಥಳದಲ್ಲೇ ಮೃತ್ಯು

ಹಾಸನ: ಕಾರು ಹಾಗೂ ಟ್ರಕ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಹೊರವಲಯದ ಈಚನಹಳ್ಳಿ ಬಳಿ ಇಂದು ಮುಂಜಾನೆ ಸಂಭವಿಸಿದೆ.

ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಬಾಲಕ ಚೇತನ್, ಡ್ರೈವರ್ ರಾಕೇಶ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತರು ಹೊಸಕೋಟೆ ತಾಲ್ಲೂಕಿನ, ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರು ಎನ್ನಲಾಗಿದೆ.

ಇಬ್ಬರು ಮಹಿಳೆ, ಮೂವರು ಪುರುಷರು, ಒಂದು ಮಗು ಕೂಡ ಮೃತಪಟ್ಟಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಕುಟುಂಬ ತೆರಳಿತ್ತು. ವಾಪಸ್ ಊರಿಗೆ ಮರಳುವಾಗ ನಿದ್ರೆ ಮಂಪರಿನಲ್ಲಿ ಭೀಕರ ಅಪಘಾತ ಸಂಭವಿಸಿದೆ.





























 
 

ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top