ಮನೆಗೆ ನುಗ್ಗಿದ ಕಳ್ಳರು ಡಿವಿಆರ್ ಹೊತ್ತೊಯ್ದರು

ವಿಟ್ಲ : ಮನೆಗೆ ನುಗ್ಗಿದ ಕಳ್ಳರು ಒಂದು ಲಕ್ಷ ರೂ. ಮೌಲ್ಯದ ವಾಚ್ ಜತೆಗೆ ಡಿವಿಆರ್ ಹಪತ್ತೊಯ್ದ ಘಟನೆ ವಿಟ್ಲ ಪರ್ತಿಪಾಡಿನಲ್ಲಿ ನಡೆದಿದೆ.

ವಿಟ್ಲ ಪಡೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಎಂ.ಕೆ.ಖಲೀಲ್ ಎಂಬವರ ಮನೆಗೆ ಕನ್ನ ಹಾಕಿದ್ದಾರೆ. ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಹ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು.

ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು. ಎ.ಸಿ.ಚಾಲು ಮಾಡಿಯೇ ಆರಾಮವಾಗಿ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಗಂಟೆಗಳ ಕಾಲ ಸಾಕಷ್ಟು ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ Rado ವಾಚ್ ಮಾತ್ರ ಕಳ್ಳರ ಪಾಲಾಗಿದೆ. ಮಾಲಿಕ ಖಲೀಲ್ ಕುಟುಂಬ ವಿದೇಶದಲ್ಲಿರುವ ಕಾರಣ ಅದೃಷ್ಟವಶಾತ್ ಚಿನ್ನಾಭರಣಗಳೆಲ್ಲವೂ ಸೇಫಾಗಿದೆ. ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top