ಎಲ್ಲರ ಮನಸ್ಸನ್ನು ಅರಿಯುವ ಮನಸ್ಸು ಕೇಶವರದ್ದು | ಎಸ್‍.ಆರ್.ಕೆ. ಲ್ಯಾಡರ್ಸ್‍ ನ ರಜತ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ | ಕೃಷಿಕ ಕೃಷಿ ಉದ್ದಿಮೆದಾರನಾಗಬೇಕು ಎಂಬುದನ್ನು ತನ್ನ ಸಾಧನೆ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ : ಸಂಜೀವ ಮಠಂದೂರು | ಕೇಶವ ಅಮೈಯವರ ಸಂಶೋಧನಾ ವಿಭಾಗ ಬಹಳ ಸ್ಟ್ರಾಂಗ್ ಆಗಿದೆ : ಡಾ.ಮೋಹನ್ | ಕೇಶವ ಅಮೈಯವರು ತನ್ನ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಮುಂದಾಳು  : ಡಾ.ಪ್ರಸನ್ನ ಹೆಬ್ಬಾರ್ | ಎಲ್ಲರನ್ನೂ ಮುಂದೆ ತರುವ ಮನಸ್ಸು ಕೇಶವರದ್ದು : ಸುರೇಶ್ ಬೈಲು | ದೇವರು ಕೇಶವರ ಜೊತೆಗಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ: ಅರವಿಂದ್ ಬೋಳಾರ್ | ಇದು ಸಾಧನೆಯ ಸಮಾವೇಶವಲ್ಲ. ಸಹಕಾರ ನೀಡಿದವರಿಗೆ ಕೃತಜ್ಞತಾಭಾವದ ಸಮಾವೇಶ : ಕೇಶವ ಅಮೈ

ಕಡಬ: ಖ್ಯಾತ ಕೃಷಿ ಯಂತ್ರೋಪಕರಣಗಳ ಸಂಸ್ಥೆ ಎಸ್‍.ಆರ್.ಕೆ. ಲ್ಯಾಡರ್ಸ್ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಶನಿವಾರ ಸಂಜೆ ಕೊಯಿಲ ಗ್ರಾಮದ ಕಲಾಯಿಗುತ್ತುವಿನಲ್ಲಿ ನಡೆಯಿತು.

ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪಾಲ್ಗೊಂಡು ಮಾತನಾಡಿ, ಕೇಶವರಂತಹ ಸಾಧಕರನ್ನು ಗೌರವಿಸಲು ಬಂದಿದ್ದೇವೆ. ಇದು ಅವರ ಉದ್ಯಮದಲ್ಲಿ ಹೆಗಲಿಗೆ ಹೆಗಲು ಕೊಟ್ಟವರನ್ನು ಗೌರವಿಸುವ ಕಾರ್ಯಕ್ರಮವಾಗಿದೆ. ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿ ಎಲ್ಲರ ಮನಸ್ಸನ್ನು ಅರಿಯುವ ಮನಸ್ಸು ಕೇಶವರದ್ದು. ರೈತ ದೇಶದ ಬೆನ್ನೆಲುಬು. ಅಂತಹ ರೈತನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಮುಂದೆ ಸುವರ್ಣ ಸಂಭ್ರಮ ಆಚರಿಸುವ ಯೋಗ ಕೂಡಿ ಬರಲಿ ಎಂದರು.

ಇನ್ನೋರ್ವ ಗೌರವ ಅತಿಥಿಯಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಇಡಿ ಸಮಾಜಕ್ಕೆ ಕೇಶವರು ಆದರ್ಶ ವ್ಯಕ್ತಿಯಾಗಿದ್ದಾರೆ. ಏಣಿ ಮೂಲಕ ಆಕಾಶವನ್ನು ಮುಟ್ಟಿ ಚಂದ್ರಲೋಕವನ್ನು ಹೇಗೆ ತಲುಪಬಹುದು ಎಂಬುದನ್ನು ತೋರಿಸಿದ್ದಾರೆ. ಸಂಘಟಕನಾಗಿ ಜಿಲ್ಲೆಯ ಜನರನ್ನು ಏಣಿಯ ಮೂಲಕ ಹೇಗೆ ಸೇರಿಸಬಹದು ಎಂಬುದು ಇಂದಿನ ಕಾರ್ಯಕ್ರಮದಿಂದ ತಿಳಿದು ಬಂದಿದೆ. ಕೇಶವ ಅಮೈ ಅವರು ಸಾಧನೆ ಜತೆ ಸಮಾಜಮುಖಿ ಕಾರ್ಯ ಎದ್ದು ಕಾಣುತ್ತಿದೆ. ಕೃಷಿಯಿಂದ ವಿಮುಖನಾಗಿ ಪೇಟೆ ಪಟ್ಟಣಗಳಲ್ಲಿ ತೆರಳುವ ಈ ಕಾಲ ಘಟ್ಟದಲ್ಲಿ ಅದಕ್ಕೆ ಅಂಕಿತ ಹಾಕಲು ಹೊರಟಿದ್ದಾರೆ. ಕೇವಲ ಕೃಷಿ ಮಾತ್ರವಲ್ಲದೆ ಕೃಷಿಕ ಕೃಷಿ ಉದ್ದಿಮೆದಾರನಾಗಬೇಕು ಎಂಬುದನ್ನು ತನ್ನ ಸಾಧನೆ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ. ಇಂದು ರಜತ ಸಂಭ್ರಮದ ಸಮಾರೋಪ ಆಚರಿಸುವ ಮೂಲಕ ಪರಿಸರದಲ್ಲಿ ಕೃಷಿ ಕಂಪನ್ನು, ಇಂಪನ್ನು ಪಸರಿಸುವ ಕೆಲಸ ಮಾಡಿದ್ದಾರೆ ಎಂದರು.































 
 

‘ರಜತ ಮೆಟ್ಟಿಲು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಗೇರು ಸಂಶೋಧನಾ ಕೇಂದ್ರದ ಹಿರಿಯ ವಿಜ್ಷಾನಿ ಡಾ.ಮೋಹನ್ ಮಾತನಾಡಿ, ಅದ್ಭುತ ಕಾರ್ಯುಕ್ರಮ.ಕೇಶವ ಅಮೈಯವರ ಸಂಶೋಧನಾ ವಿಭಾಗ ಬಹಳ ಸ್ಟ್ರಾಂಗ್ ಇದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ತನ್ನ ಪ್ರಾಡಕ್ಟ್ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ವಿದೇಶಗಳಿಗೆ ಅವರ ಪ್ರಾಡಕ್ಟ್ ತಲುವುವಂತಾಗಲಿ ಎಂದರು.

ಮುಖ್ಯ ಅತಿಥಿಯಾಗಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಮಾತನಾಡಿ, ಸ್ಥಳೀಯರ ಜತೆ ಒಳ್ಳೆಯ ಸಂಬಂಧ ಇಟ್ಟಾಗ ಆಗ ತನ್ನ ಕ್ಷೇತ್ರ ಬೆಳೆಯುತ್ತದೆ, ಉದ್ದಿಮೆ ಬೆಳೆಯುತ್ತದೆ. ಅದಕ್ಕೆ ಉದಾಹರಣೆ ಕೇಶವ ಅಮೈಯವರು. ಕೊಯಿಲದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿಸಿ ಕಾರ್ಯಕ್ರಮ ಮಾಡಿರುವುದು ಇದೇ ಪ್ರಥ,ಮ. ತನ್ನ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಮುಂದಾಳು, ಸಮಾಜಕ್ಕೆ ಬೆಳಕಾಗಿ ನಮಗೆಲ್ಲರಿಗೆ ಆದರ್ಶ ಪ್ರಾಯರಾಗಿದ್ದಾರೆ. ಮುಂದೆ ಅವರ ಸಂಸ್ಥೆ ರಜತ ಪಥದಿಂದ ಸುವರ್ಣ ಪಥಕ್ಕೆ ಸಾಗ;ಲಿ ಎಂದರು.

ಕಡಬ ಒಕ್ಕಲಿಗ ಗೌಡ ಸೇವ ಸಂಘದ ಅಧ್ದಕ್ಷ ಸುರೇಶ್ ಬೈಲು ಮಾತನಾಡಿ, ಮನುಷ್ಯನಲ್ಲಿ ಇರಬೇಕಾದ್ದು ಕೃತಜ್ಞತಾ ಭಾವನೆ. ಅದು ಕೇಶವರಲ್ಲಿದೆ. ಎಲ್ಲರನ್ನೂ ಮುಂದೆ ತರುವ ಮನಸ್ಸು ಅವರಲ್ಲಿದೆ. ಬಡತನ, ಅವಮಾನಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಸಾಧನೆ ಎಂಬುದು ಸಾಧಕನ ಸೊತ್ತು, ಕೇಶವ ಅಮೈ ಅವರು ಸಮಾಜದ ಸೊತ್ತು ಎಂದರು.

ತುಳು ಚಿತ್ರನಟ ಅರವಿಂದ ಬೋಳಾರು ಮಾತನಾಡಿ, ಊರಿನವರ ಪ್ರೋತ್ಸಾಹ ಹೇಗಿದೆ ಎಂಬುದು ಕಾರ್ಯಕ್ರಮದಿಂದ ತಿಳಿದು ಬಂದಿದೆ. ಅನುಕಂಪ ಬೇಡ. ಸಹಕಾರ ಬೇಕು. ದೇವರು ಅವರ ಜತೆಗಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ. ಸಂಸ್ಥೆ ಇನ್ನಷ್ಟು ಬೆಳೆಯಲಿ. ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಭಾಗ್ಯ ಕೇಶವಣ್ಣನಿಗೆ ಬರಲಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‍.ಆರ್‍.ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಮಾತನಾಡಿ, ಗುರುಗಳು ನನ್ನ ಬಳಿಯಲ್ಲೇ ಕೂತಿದ್ದಾರೆ. ಇದಕ್ಕಿಂತ ದೊಡ್ಡ ಸೌಭಾಗ್ಯ ಬೇರಿಲ್ಲ ಬೆಟ್ಟ ಮರಿಯಪ್ಪ ಭಟ್ಟರು, ರೆಜಿ ಯವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ನನ್ನ ಸಾಧನೆಯಲ್ಲಿ ಸಿಬ್ಬಂದಿಗಳ ಪಾತ್ರವೂ ಇದೆ. ಇದು ಸಾಧನೆಯ ಸಮಾವೇಶವಲ್ಲ. ಸಹಕಾರ ನೀಡಿದವರಿಗೆ ಕೃತಜ್ಞತಾಭಾವದ ಕಾರ್ಯಕ್ರಮ ಎಂದರು.

ಮಂಗಳೂರಿನ ವಿನು ಲ್ಯಾಡರ್ಸ್ನ ನ ಮಾಲಕ ವಿನೋದ್ ಎಂ. ಕೆರ್ಲೇಕರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಲತಿ ಕೇಶವ ಅಮೈ ರಜತ ಸಂಭ್ರಮದ 10 ಸರಣಿ ಕಾರ್ಯಕ್ರಮದ ಕಿರು ಪರಿಚಯ ಮಾಡಿದರು.

ಮುಖ್ಯ ಅತಿಥಿಗಳಾಗಿ ಆದಿಶಕ್ತಿ ಲ್ಯಾಡರ್ಸ್ ಮಾಲಕ ಚಂದ್ರಶೇಖರ ಕುದ್ಮಾರು ಶುಭ ಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12 ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯಿತು. ಬಳಿಕ ಮಂಗಳೂರು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಯಶ್ವಿನ್ ದೇವಾಡಿಗ ನಿರ್ದೆಶನದಲ್ಲಿ ನೃತ್ಯ ವೈವಿದ್ಯ, ಸರಿಗಮಪ ಖ್ಯಾತಿಯ ಪ್ರಜ್ಞಾ ರೈ ಹಾಗೂ ಸಮನ್ವಿ ಪುತ್ತೂರು ಅವರಿಂದ ಸುಮಧುರ ಗಾಯನ, ತುಳು ಕನ್ನಡ ಚಿತ್ರರಂಗದ ತಾರೆಯರ ಸಮಾಗಮ, ಬೆಂಗಳೂರಿನ ರಿಚರ್ಡ್ ಲೂಯಿಸ್, ಮಿಮಿಕ್ರಿ ಗೋಪಿ, ಅಸದುಲ್ಲಾಖಾನ್, ಕಿರ್ಲೊಸ್ಕರರ್ ಸತ್ಯ, ಮೈಸೂರ್ ಆನಂದ್ ಅವರಿಂಸ ಹಾಸ್ಯ ರಸಸಂಜೆ, ತೆಂಕುತಿಟ್ಟು ಪ್ರಸಿದ್ದ ಹಾಸ್ಯ ಕಲಾವಿದರಿಂದ ತುಳು ಯಕ್ಷ ತೆಲಿಕೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top