ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ಸಂಘ , ಟ್ರೈನಿಂಗ್ ಆ್ಯಂಡ್ ಪ್ಲೇಸ್‌ಮೆಂಟ್ ಸೆಲ್ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಪುತ್ತೂರು ರೀಜನ್‌ಗಳ ಸಯೋಗದಲ್ಲಿ ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ “ಅನ್‌ಲಾಕಿಂಗ್ ದ ಪಾಥ್ : ನ್ಯಾವಿಗೇಟಿಂಗ್ ಕರಿಯರ್ ಇನ್ ಬ್ಯಾಂಕಿಂಗ್ ಸೆಕ್ಟರ್” ಎಂಬ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊರವರು ಬ್ಯಾಂಕಿಂಗ್ ಒಂದು ಬಹಳಷ್ಟು ಉದ್ಯೋಗಾವಕಾಶಗಳಿರುವ ಕ್ಷೇತ್ರ. ಬ್ಯಾಂಕಿಂಗ್ ಕ್ಷೇತ್ರವು ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ಮೂಲಾಧಾರವಾಗಿ ನಿಂತಿದೆ. ಬ್ಯಾಂಕಿಂಗ್ ಪ್ರಪಂಚದ ಒಳ ಹೊರಗುಗಳನ್ನು ಸೂಕ್ಷ್ಮತೆಗಳನ್ನು ಅರಿತು ವೃತ್ತಿ ಜೀವನದಲ್ಲಿ ಸ್ಪರ್ಧಾತ್ಮಕವಾಗಿ ಮತ್ತು ಚುರುಕಾಗಿ ಉಳಿಯಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಬ್ಯಾಂಕ್ ಆಫ್ ಬರೋಡಾ ಪುತ್ತೂರಿನ ಯೋಜನಾಧಿಕಾರಿ ಪ್ರಶಾಂತ ಎಸ್., ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನದ ಮಾರ್ಗದರ್ಶನ ನೀಡಿದರು. ಬ್ಯಾಂಕ್ ಗಳಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂದು ವಿವರವಾಗಿ ತಿಳಿಸಿದರು.
ಮಹಿಮಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಮ್ರಾನ್ ತಾಜ್ ಸ್ವಾಗತಿಸಿದರು. ತನ್ವಿರ್ ಪಿಂಟೋ ವಂದಿಸಿದರು. ಫಾಹಿಮಾ ಕಾರ್ಯಕ್ರಮ ನಿರೂಪಿಸಿದರು.