ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಜ್ವಲ್ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.17 ರಂದು ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೈ ಎಂಬಾತ ಕೀಳು ಮಟ್ಟದ ಅವಮಾನಕಾರಕ ಪದಗಳನ್ನು ಬಳಸಿ ತೇಜೋವಧೆ ಮಾಡಿದ್ದು, ಸಾಮಾಜಿಕ ಜಾಲತಾಣದ ಮುಖಾಂತರ ರೋಡಿನಲ್ಲಿ “ಕಲ್ಲೇಟು ಬೀಳುವುದು ಖಚಿತ ” ಎಂಬುದಾಗಿ ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ ಮಾಜಿ ಶಾಸಕರು ಪುತ್ತೂರು ನಗರ ಠಾಣೆಗೆ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು..
ಇದೀಗ ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ 1860 (U/S- 504,506) ರಂತೆ ಪ್ರಕರಣ ದಾಖಲಾಗಿದೆ.