ಪುತ್ತೂರು: ಕೆಯ್ಯೂರು ಡಾ.ಪಿ.ಬಿ.ರೈ ಪ್ರತಿಷ್ಥಾನ ಹಾಗೂ ಪವಿತ್ರ ನೆಲ್ಯಾಡಿ ವಿವಾ ಎಂಟರ್ ಪ್ರೈಸಸ್ ಜಂಟಿ ಆಶ್ರಯದಲ್ಲಿ ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಗಾರ ಮೇ 23 ಗುರುವಾರ ಬೆಳಿಗ್ಗೆ 10 ಕ್ಕೆ ಪುತ್ತೂರು ಬಂಟರ ಭವನದಲ್ಲಿ ನಡೆಯಲಿದೆ ಎಂದು ಪಿ.ಬಿ.ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಾ ಕಿಸಾನ್ ಕಿಂಗ್ ಅಡಕೆ, ತೆಂಗು ಸೇರಿದಂತೆ ಪ್ರತಿಯೊಂದು ಬೆಳೆಗಳಿಗೆ ಉತ್ತಮ ಸಾವಯವ ಔಷಧಿಯ ಜತೆ ಗೊಬ್ಬರವೂ ಆಗಿದ್ದು, ಈಗಾಗಲೇ ಎಲೆಚುಕ್ಕಿ, ಹಳದಿರೋಗ, ಬೇರುಗುಳ ಮುಂತಾದ ರೋಗಗಳನ್ನು ಹತೋಟಿಗೆ ತರುವಲ್ಲಿ ಸಫಲವಾಗಿದೆ. ಇದನ್ನು ರೈತ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ಪಿ.ಬಿ.ರೈ.ಪ್ರತಿಷ್ಠಾನದ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಡಾ.ಪಿ.ಬಿ.ರೈ.ಪ್ರತಿಷ್ಠಾನದ ಅಧ್ಯಕ್ಷ ಸಹಕಾರ ರತ್ನಶ್ರೀ ದಂಬೆಕ್ಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಲಿದ್ದಾರೆ, ಸವಣೂರು ವಿದ್ಯಾ ಸಮೂಹ ಸಂಸ್ಥೆಯ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಪುತ್ತೂರು ಕೃಷಿಕ ಸೇಡಿಯಾವು ಜನಾರ್ಧನ ಭಟ್, ಸುದ್ದಿ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕ ಡಾ. ಶಿವಾನಂದ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅರಿಯಡ್ಕ ಕೃಷಿಕ ಗುಂಡ್ಯಡ್ಕ ವಾಸು ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಸನ ಜಿಲ್ಲೆ ಕೃಷಿ ತಜ್ಞ ಜಯಕುಮಾರ್ ಉಡುವಾರೆ ಹಾಗೂ ತುರುವೆಕೆರೆ ಸಾವಯವ ಕೃಷಿ ತಜ್ಞ ಶಿವಶಂಕರ್ ಡಿ.ಸಿ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಪಿ.ಬಿ.ರೈ ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಉಪಸ್ಥಿತರಿದ್ದರು.