ಪುತ್ತೂರು: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆಯೊಂದರ ದನದ ಹಟ್ಟಿಯ ಗೋಡೆ ಕುಸಿದು ಹಸು, ಕರು ಮೃತಪಟ್ಟ ಘಟನೆ ಪಡೂರು ಗ್ರಾಮದ ನೆಲಪ್ಪಾಲು ಎಂಬಲ್ಲಿ ನಡೆದಿದೆ.
ಪಡೂರು ಗ್ರಾಮದ ನೆಲಪ್ಪಾಲು ಎಂಬಲ್ಲಿ ವಸಂತ ಎಂಬವರ ಮನೆ ಸಮೀಪದ ಹಟ್ಟಿಯ ಗೋಡೆ ಮಳೆಗೆ ಬಿದ್ದು ಹಟ್ಟಿಯಲ್ಲಿದ್ದ ಹಸುಗಳ ಪೈಕಿ ಒಂದು ಹಸು ಮತ್ತು ಕರು ಮೃತಪಟ್ಟಿದೆ.
ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಕುಂಞಿ ಅಹಮ್ಮದ್, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರು, ನಗರಸಭಾ ಸದಸ್ಯ ಕೆ ಜೀವಂಧರ್ ಜೈನ್ ಭೇಟಿ ನೀಡಿದ್ದಾರೆ.
























