ಪುತ್ತೂರು: ಪುತ್ತೂರಿನ ರೈ ಎಸ್ಟೇಟ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬೆಂಗಳೂರಿನ ಬಿಎಸ್ ಎಂ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ವಿದ್ಯಾರ್ಥಿ ಮಂದಿರಂ, ವಿಕಸನ ಫೌಂಡೇಶನ್, ಟಿಸಿಹೆಚ್ ಆರ್ ಆ್ಯಪ್, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕೆ-ಸಿಇಟಿ ವಿದ್ಯಾಮೃತ ತರಬೇತಿ ಕಾರ್ಯಾಗಾರ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಹತ್ತು ದಿನಗಳ ಆಫ್ ಲೈನ್ ಅಂಡ್ ಹಾಗೂ 15 ದಿನಗಳ ಆನ್ ಲೈನ್ ತರಗತಿ ವಿದ್ಯಾರ್ಥಿಗಳಲ್ಲಿ ಕೆ-ಸಿಇಟಿ ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸ ಮೂಡಿಸಿತು. ಪುತ್ತೂರು ಹಾಗೂ ಆಸುಪಾಸಿನ ಸರಕಾರಿ, ಖಾಸಗಿ, ಅನುದಾನಿತ ಶಾಲೆಯ ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡರು.
ನನಗೆ ಕೆ-ಸಿಇಟಿ ಪರೀಕ್ಷೆಯ ಸಂಪೂರ್ಣ ಮಾಹಿತಿ ಇರಲಿಲ್ಲ. ಬೋರ್ಡ್ ಎಕ್ಸಾಮ್ ಮತ್ತು ಸಿಇಟಿ ಪರೀಕ್ಷೆಗೆ ತುಂಬಾ ವ್ಯತ್ಯಾಸ ಇದೆ. ಬೋರ್ಡ್ ಪರೀಕ್ಷೆಗೆ ಒಂದು ಪುಟ ಇರುವ ಉತ್ತರ ಸಿಇಟಿಯಲ್ಲಿ 3-4 ಸ್ಟೆಪ್ಸ್ ಮಾಡಬೇಕು. ಪರಿಣಾಮ ನಮಗೆ ಟೈಮ್ ಮ್ಯಾನೆಜ್ಮೆಂಟ್ ಮಾಡಲು ಆಗುವುದಿಲ್ಲ. ಇಲ್ಲಿಗೆ ಬಂದ ಮೇಲೆ ಎಲ್ಲಾ ಗೊತ್ತಾಯಿತು. ಫೀಸ್ ಕೂಡಾ ಜಾಸ್ತಿ ಇರ್ಲಿಲ್ಲ. ಕೇವಲ 960 ರೂಪಾಯಿಗೆ 4 ಬುಕ್ಸ್ ಕೂಡಾ ಕೊಟ್ಟು ನಮಗೆ ಪರೀಕ್ಷೆ ಪ್ರಿಪೇರ್ ಆಗ್ಮೇಕು ಎಂದು ಹೇಳಿಕೊಟ್ಟರು. ಈ ಕ್ಲಾಸ್ ಬಂದ ಮೇಲೆ ಮೊದ್ಲು ಬರ್ತಿದ್ದ ರ್ಯಾಂಕ್ ಗಿಂತ ಸ್ವಲ್ಪ ಜಾಸ್ತಿ ಬರಬಹುದು ಎಂಬ ನಂಬಿಕೆ, ಆತ್ಮವಿಶ್ವಾಸ ಬಂದಿದೆ. – – ಸಿಂಚನ, ಸರಕಾರಿ ಪಿಯು ಕಾಲೇಜು, ಕಡಬ