ಸುಳ್ಯ,: ಎಡಮಂಗಲದ ಯುವಕನೋರ್ವ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.
ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪುಚ್ಚಜ್ಜೆ ನಿವಾಸಿ ದಿ.ಪುಟ್ಟಣ್ಣ ಗೌಡ ಎಂಬವರ ಪುತ್ರ ಪ್ರಸನ್ನ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು
ಪ್ರಸನ್ನ ಅವರು ಬೆಂಗಳೂರಿನ ಮಾರತಹಳ್ಳಿಯ ಸಂಸ್ಥೆಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಭಾನುವಾರ ರಾತ್ರಿ ಪಾಳಿನ ಕೆಲಸ ನಿರ್ವಹಿಸುತ್ತಿದ್ದು ಸೋಮವಾರ ಬೆಳಗ್ಗೆ ಸಂಸ್ಥೆಯ ಕೊಠಡಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು.ತಾಯಿ, ಇಬ್ಬರು ಸಹೋದರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.