ಸುಳ್ಯ: ಗುತ್ತಿಗಾರು ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಪರಿವೃತ್ತ ಪದ್ಮಾಸನದಲ್ಲಿ 01 ಗಂಟೆ 08 ನಿಮಿಷ 10 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ನಿಹಾನಿ ವಾಲ್ತಾಜೆ ಗುತ್ತಿಗಾರು ಬೆಸ್ಟ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಶಾಂತ್ ವಾಲ್ತಾಜೆ ಮತ್ತು ಚೈತ್ರ ದಂಪತಿ ಪುತ್ರಿ. ಅವರು ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ