ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ತಿರುಗಾಡುತ್ತಿದ್ದ ಹೋರಿಗಳು ಮೇ 1 ರಿಂದ ನಾಪತ್ತೆಯಾಗಿರುವ ಹೋರಿಗಳ ಪತ್ತೆಗಾಗಿ ಬಜರಂಗ ದಳದವರು ದೈವದ ಮೊರೆ ಹೋಗಿದ್ದಾರೆ.
ದೇವಸ್ಥಾನದ ವಠಾರದಲ್ಲೇ ಸುತ್ತುತ್ತಿದ್ದ ಎರಡು ಹೋರಿಗಳು ಕಳ್ಳತನವಾಗಿರುವ ಶಂಕೆ ವ್ಯಕ್ತಪಡಿಸಿರುವ ಬಜರಂಗದಳ ಪುತ್ತೂರು ಘಟಕ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಹೋರಿ ಅಡ್ಯನಡ್ಕ ಸಮೀಪವಿರುವ ಸಾಧ್ಯತೆ ಕಂಡು ಬಂದಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಹೋರಿ ಬದುಕಿರುವ ಬಗ್ಗೆ ಮಾಹಿತಿ ದೊರಕಿದೆ. ಹೋರಿಯನ್ನು ಮಾಂಸಕ್ಕಾಗಿ ಕೊಂಡು ಹೋಗಿರುವ ಸಾಧ್ಯತೆ ಎಂದು ಪ್ರಶ್ನಾಚಿಂತನೆಯಲ್ಲಿ ಸೂಚನೆ ದೊರಕಿದೆ.
ಈ ಕಾರಣಕ್ಕಾಗಿ ದೈವದ ಮೊರೆ ಹೋದ ಬಜರಂಗ ದಳ ಕಾರಣಿಕ ಕ್ಷೇತ್ರ ಬಲ್ನಾಡು ಉಳ್ಳಾಲ್ತಿ ಅಮ್ಮನ ಮೊರೆ ಹೋಗಿದ್ದಾರೆ. ಬಜರಂಗದಳದ ನಾಯಕರು, ಕಾರ್ಯಕರ್ತರು ಉಳ್ಳಾಲ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹೋರಿ ಹಿಂದುರುಗಿ ಬರಲು ಪ್ರಾರ್ಥನೆ ಮಾಡಿರುವ ಅವರು ಹೋರಿ ಕಳ್ಳತನಗೈದವರಿಗೆ ತಕ್ಕ ಪಾಠ ದೈವದ ಮೂಲಕ ಸಿಗುವಂತೆ ಪ್ರಾರ್ಥಿಸಿದ್ದಾರೆ. ಹೋರಿ ನಾಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.