ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಗೋಕಳ್ಳತನ | ತನಿಖೆ ನಡೆಸಿ ಗೋ ಕಳ್ಳರನ್ನು ಬಂಧಿಸುವಂತೆ ನಗರ ಠಾಣೆಗೆ ದೂರು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮೇ ಒಂದರಂದು ರಾತ್ರಿ  ನಡೆದ ಗೋ ಕಳ್ಳತನವಾದ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಯಿತು.

ದೇವಸ್ಥಾನದ ವಠಾರದಿಂದ ಎರಡು ಗೋ ಕಳ್ಳತನವಾಗಿದ್ದು ಈ ಕುರಿತು ತನಿಖೆ ನಡೆಸಿ ಗೋಕಳ್ಳರನ್ನು ಬಂಧಿಸುವಂತೆ ದೂರು ನೀಡಲಾಯಿತು.

ಈ ಸಂದರ್ಭ ಬಜರಂಗದಳ ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ , ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ಲು, ಹರ್ಷಿತ್ ಬಲ್ನಾಡ್, ರೂಪೇಶ್ ಬಲ್ನಾಡು, ಜೀವನ್ ಬಲ್ನಾಡು, ಗುರುರಾಜ್ ಬಲ್ನಾಡು ಉಪಸ್ಥಿತರಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top