ಮನಸ್ಸಿನ ಆರೋಗ್ಯ ವೃದ್ಧಿಗೆ ರುದ್ರಾಕ್ಷಿ ಅಗತ್ಯ: ಕೇಶವ ಪ್ರಸಾದ್ ಮುಳಿಯ

ಪುತ್ತೂರು:  ಹಿಂದೂ ಧರ್ಮದಲ್ಲಿ, ರುದ್ರಾಕ್ಷ ಕಂಕಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಶಿವನಿಗೆ ಸಂಬಂಧಿಸಿದ ರುದ್ರಾಕ್ಷ ಕಂಕಣವು ಜನಸಾಮಾನ್ಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದು ಜೀವನಕ್ಕೆ ಸಂಬಂಧಿಸಿದ ಕಷ್ಟಗಳು ಮತ್ತು ಸಮಸ್ಯೆಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.  ರುದ್ರಾಕ್ಷಿಗಳನ್ನು ಇತ್ತೀಚಿಗಿನ ದಿನದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ ರುದ್ರಾಕ್ಷಿ ಕಲೆಕ್ಷನ್ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಅನಾವರಣಗೊಂಡಿದೆ.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ರುದ್ರಾಕ್ಷಿ ಹೊಸ ವಿನ್ಯಾಸದ ಸಂಗ್ರಹವನ್ನು ಅನಾವರಣಗೊಳಿಸಿದರು. ಆರಂಭದಲ್ಲಿ ದೀಪ ಪ್ರಜ್ವಲಿಸಿ, ಬಳಿಕ ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದರು. ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದವನ್ನು ಮುಳಿಯ ಜ್ಯುವೆಲ್ಸ್ ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರಿಗೆ ನೀಡಿ ಸಂಸ್ಥೆಗೆ ಶ್ರೀ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿದರು.

ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಆರೋಗ್ಯ ಪೂರಿತ ಜೀವನವನ್ನು ವೃದ್ಧಿಸಲು ಪೂರಕವಾಗಿ ರುದ್ರಾಕ್ಷಿ ಸರ, ಕೈಯ ಆಭರಣ ಬಹಳ ಮಹತ್ವ ಪಡೆದಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಭಕ್ತಿಯ ಮಾರ್ಗದರ್ಶನ ನೀಡುತ್ತಿರುವ ಮುಳಿಯ ಜ್ಯುವೆಲ್ಸ್‌ಗೆ ಪರಿವಾರ ಸಹಿತ ಮಹಾಲಿಂಗೇಶ್ವರ ದೇವರ ಪೂರ್ಣ ಅನುಗ್ರಹ ಇರಲಿ. ಗ್ರಾಹಕರಿಗೂ ರುದ್ರಾಕ್ಷಿ ಮಾಲೆಯನ್ನು ಧರಿಸುವ ಯೋಗ ಭಾಗ್ಯ ಬರಲಿ ಎಂದು ಹಾರೈಸಿದರು.































 
 

ಮುಳಿಯ ಜ್ಯುವೆಲ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ರುದ್ರಾಕ್ಷಿ ವಿಶೇಷ ಆಭರಣ ಯಾಕೆಂದರೆ ‘ಸುಖಸ್ಯ ಮೂಲ ಧರ್ಮ’ ಎಂದು ಆಚಾರರಾಗಿರುವ ಚಾಣಕ್ಯ ಹಿಂದೆ ಹೇಳಿದ್ದಾರೆ. ನಿತ್ಯ ದೇವರ ದ್ಯಾನ ಮಾಡಲು ತುಳಸಿ ಮಾಲೆ, ರುದ್ರಾಕ್ಷಿ ಮಹತ್ವ ಪಡೆದಿದೆ. ಮನಸ್ಸಿನ ಆರೋಗ್ಯ ವೃದ್ಧಿಯಾಗಲು ರುದ್ರಾಕ್ಷಿ ಮಹತ್ವ ಪಡೆದಿದೆ. ಇದನ್ನು ಪ್ರತಿಯೊಬ್ಬರು ಧರಿಸಬಹುದು ಎಂಬುದಕ್ಕೆ ಸಣ್ಣ ಸಣ್ಣ ರುದ್ರಾಕ್ಷಿಯನ್ನು ಸಣ್ಣ ಸಣ್ಣ ಮಾಲೆಯನ್ನಾಗಿ ಕೈ ಬಳೆ, ಉಂಗುರವನ್ನಾಗಿ, ಸರವನ್ನಾಗಿ ಸಿದ್ಧಪಡಿಸಲಾಗಿದೆ. ಹಿಂದೆ ಗ್ರಾಹಕರು ಮಾಡಿಸಿ ಧರಿಸುತ್ತಿದ್ದರು. ಇದೀಗ ಗ್ರಾಹಕರಿಗೆ ಅನುಕೂಲವಾಗಲು ರುದ್ರಾಕ್ಷಿ ಕಲೆಕ್ಷನ್ ಸಿದ್ಧಪಡಿಸಲಾಗಿದೆ. ಆರ್ಡರ್ ಕೊಟ್ಟು ಮಾಡಿಸುವ ಬದಲು ನೇರ ಬಂದು ಖರೀದಿ ಮಾಡಬಹುದು. ರುದ್ರಾಕ್ಷಿ ಮಣಿಗಳ ಕೈ ಬಳೆಯು ಕುತ್ತಿಗೆಗೆ ದೊಡ್ಡ ಮಾಲೆಯನ್ನು ಧರಿಸಲು ಇಷ್ಟಪಡದವರಿಗೆ ಸೂಕ್ತವಾಗಿದೆ ಎಂದ ಅವರು ರುದ್ರಾಕ್ಷಿ ದೇಹಕ್ಕೂ ಮನಸ್ಸಿಗೂ ವೃದ್ಧಿ ಸಿಗುತ್ತದೆ. ಕೈ ಆಭರಣ, ಗಂಟಾಭರಣ, ಪೆಂಡೆಂಟ್, ಪದಕ ಸಹಿತ ಹಲವು ಕಲೆಕ್ಷನ್ ನಮ್ಮಲಿ ಇವೆ ಎಂದು ಹೇಳಿದರು. ಮುಳಿಯ ಜ್ಯುವೆಲ್ಸ್‌ನ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಎಂ.ಡಿ. ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೀವ, ಶಂಕರ್ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top