ಹೊಸದಿಲ್ಲಿ: ಭಾರತೀಯ ಹವಾಮಾನ ಇಲಾಖೆಯೂ ಈ ಬಾರಿಯ ಮುಂಗಾರು ಮಳೆಯ ಕುರಿತು ಮುನ್ಸೂಚನೆ ನೀಡಿದ್ದು, ನಿರೀಕ್ಷೆಗಿಂತ 2 ದಿನ ಮೊದಲೇ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹವಮಾನ ಇಲಾಖೆಯ ಪ್ರಕಾರ, ಈ ವರ್ಷದ ಮುಂಗಾರು ಮಳೆ ಜೂ. 1ರಂದು ಕೇರಳ ಪ್ರವೇಶಿಸಲಿದೆ ಎಂದು ಸೋಮವಾರ ತಿಳಿಸಿದೆ.
ಮೇ 22ರಂದು ಅಪ್ಪಳಿಸಬೇಕಾಗಿದ್ದ ನೈಋತ್ಯ ಮುಂಗಾರು ಮಾರುತಗಳು ಮೇ 19ರಂದೇ ದಕ್ಷಿಣ ಅಂಡಮಾನ್, ಬಂಗಾಲ ಕೊಲ್ಲಿಯ ಆಗ್ನೆಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿವೆ ಎಂದು ಐಎಂಡಿ ಹೇಳಿದೆ.
ಮುಂಗಾರು ಮಳೆ ಈ ಬಾರಿ ಕೂಡ ಸಾಮಾನ್ಯಕ್ಕಿಂತ ಅಧಿಕವಾಗಿಯೇ ಇರಲಿದೆ ಎಂದು ಇಲಾಖೆ ಈಗಾಗಲೇ ತಿಳಿಸಿದೆ. ಮುಂಗಾರು ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಪ್ರವೇಶ ಪಡೆಯುವ ನಿರೀಕ್ಷೆ ಹೊಂದಲಾಗಿದೆ.