ಗ್ರಾಹಕರ ನ್ಯಾಯಾಲಯ : ಸೇವಾ ಕೊರತೆ ಆರೋಪ | ಪರಿಹಾರಕ್ಕೆ ಆದೇಶ 

ಮಂಗಳೂರು : ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನ್ಯತೆ ಆರೋಪದ ಪ್ರಕರಣವೊಂದರ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ ಪರಿಹಾರಕ್ಕೆ ಆದೇಶ ನೀಡಿದೆ.

ಕೃಷಿಕರಾಗಿರುವ  ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ  ನಿವಾಸಿ ಶ್ರೀನಿವಾಸ ಪೂಜಾರಿಯವರು   ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್  ವಿಮಾ ಕಂಪನಿಯ ಪಾಲಿಸಿ ಸಂಖ್ಯೆ OG-19-3125-6401-00000446 ಜೊತೆಗೆ ಮೆಡಿಕ್ಲೈಮ್ ಪಾಲಿಸಿಯನ್ನು ಹೊಂದಿದ್ದು, ಈ ಪಾಲಿಸಿಯು ದಿನಾಂಕ 19.02.2019 ರಿಂದ ಪ್ರಾರಂಭವಾಗಿ,ನಂತರ ಕಾಲಕಾಲಕ್ಕೆ ಅಗತ್ಯವಾದ ಪ್ರೀಮಿಯಂ ಪಾವತಿಸುವ ಮೂಲಕ ಮುಂದುವರಿಸಲಾಗಿತ್ತು. ಹೀಗಿರುವಾಗ,ಶ್ರೀನಿವಾಸ ಪೂಜಾರಿಯವರ ಕಾಲಿಗೆ ವಿದ್ಯುತ್ ಕತ್ತರಿಸುವ ಯಂತ್ರ ಬಿದ್ದು, ಅಪಘಾತ ಸಂಭವಿಸಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೂಡಲೇ ಅವರನ್ನು ನೆಲ್ಯಾಡಿ ಆಸ್ಪತ್ರೆಗೆ ಸಾಗಿಸಿ ಹೊಲಿಗೆ ಹಾಕಿ ವೈದ್ಯರ ಸಲಹೆ ಮೇರೆಗೆ ಸ್ಥಳಾಂತರ ಮಾಡಲಾಗಿತ್ತು . ಮಂಗಳೂರಿನ ಕದ್ರಿಯ ಪೌಂಡ್ ಗಾರ್ಡನ್‌ನಲ್ಲಿರುವ ಸಿಟಿ ಹಾಸ್ಪಿಟಲ್ ರಿಸರ್ಚ್ & ಡಯಾಗೊಸ್ಟಿಕ್ ಸೆಂಟರ್‌ನಲ್ಲಿ  ದಿನಾಂಕ  10.05.2021 ರಂದು ದಾಖಲಾಗಿ ಮತ್ತು 03.06.2021 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.ವೈದ್ಯರ ರೋಗನಿರ್ಣಯದ ಪ್ರಕಾರ, ಪಾದದ ಎಡಭಾಗದ ಹಿಂಭಾಗದಲ್ಲಿ ತೀವ್ರವಾದ ಗಾಯವನ್ನು ಅನುಭವಿಸಿದ ಕಾರಣ, ಮೊಣಕಾಲಿನ ಕೆಳಗೆ ಅಂಗಚ್ಛೇದನವನ್ನು ಮಾಡಿದ್ದು ಅದಕ್ಕೆ ರೂ.3,21,157/ – ವ್ಯಯವಾಗಿರುತ್ತದೆ.

ಮೆಡಿಕ್ಲೈಮ್ ಪಾಲಿಸಿ ನಂಬಿ ಚಿಕಿತ್ಸೆ ಪಡೆದುಕೊಂಡಿದ್ದರು :































 
 

ಆ ಸಮಯದಲ್ಲಿ ಅವರು ಮೆಡಿಕ್ಲೈಮ್ ಪಾಲಿಸಿಯನ್ನು ನಂಬಿ, ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಶ್ರೀನಿವಾಸರವರ ಎಡಗಾಲಿಗೆ ಸಂಬಂಧಿಸಿದಂತೆ ಶೇ.70% ರಷ್ಟು ಶಾಶ್ವತ ಭಾಗಶಃ ಇರುವುದನ್ನು ಗಮನಿಸಿದ್ದರೂ, ವಿಮಾ ಕಂಪನಿಯವರು  ಮೇಲಿನ ವಿಚಾರವು ಈ ಪಾಲಿಸಿಯ ಪರಿಧಿಯೊಳಗೆ ಬರುವುದಿಲ್ಲವೆಂದು ಸೇವಾ ಸೌಲಭ್ಯವನ್ನು ನಿರಾಕರಿಸಿರುತ್ತಾರೆ. ಅಲ್ಲದೇ ಕ್ಲೇಮ್ ಹಣವನ್ನು  ಮರುಪಾವತಿಯೂ ಮಾಡದೇ ಇರುವುದರಿಂದ ಶ್ರೀನಿವಾಸ ಪೂಜಾರಿಯವರಿಗೆ ಸಾಕಷ್ಟು ಖರ್ಚು- ವೆಚ್ಚಗಳಾಗಿರುತ್ತದೆ ಹಾಗೂ ಸೇವೆಯ ಕೊರತೆಯಾಗಿರುತ್ತದೆ.

ಶ್ರೀನಿವಾಸ್ ಪೂಜಾರಿಯವರು ತನ್ನ ಪರ ವಕೀಲರಾದ ಪುತ್ತೂರಿನ ನ್ಯಾಯವಾದಿ ಮಹೇಶ್ ಕಜೆ ಅವರ ಮುಖಾಂತರ ಆರಂಭದಲ್ಲಿ ವಿಮಾ ಕಂಪನಿಯವರಿಗೆ ನೋಟಿಸ್ ಅನ್ನು ಜ್ಯಾರಿ ಮಾಡಿದ್ದರು. ಆದರೆ ಕಂಪನಿಯವರು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಾಗ,ಅವರ ವಿರುದ್ಧ ಮಂಗಳೂರು ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಜಿಲ್ಲಾ ಗ್ರಾಹಕರ ಆಯೋಗ ವಿಚಾರಣೆಯನ್ನು ನಡೆಸಿ, ದಾಖಲೆಗಳನ್ನು ಪರಿಶೀಲಿಸಿ,ವಾದ-ವಿವಾದವನ್ನು ಆಲಿಸಿ,ವಿಮಾ ಕಂಪೆನಿಯವರು ಯಾವುದೇ ಅಸ್ಪಷ್ಟತೆ ಇಲ್ಲದೆ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಿದಾರರಿಗೆ ಒದಗಿಸಬೇಕು. ಆದರೆ,ಪ್ರಸ್ತುತ ಸಂದರ್ಭದಲ್ಲಿ ಶೀರ್ಷಿಕೆ ಅಡಿಯಲ್ಲಿ ಅಸ್ಪಷ್ಟತೆ ಉಂಟಾಗಿರುತ್ತದೆ. ಹೀಗಾಗಿ,ವಿಮಾ ಕಂಪೆನಿಯವರು ಸೇವೆಯಲ್ಲಿ ಕೊರತೆಯನ್ನು ಮಾಡಿದ್ದಾರೆ  ಎಂಬ ತೀರ್ಮಾನಕ್ಕೆ ಬಂದು  ದೂರನ್ನು ಪುರಸ್ಕರಿಸಿ, ಎದುರುದಾರರ ಕಂಪನಿಯವರು ಬಿಲ್ಲಿನ ಮೊತ್ತವಾದ ರೂ.9,05,000/-ಗಳನ್ನು  ಶೇ.8% ಬಡ್ಡಿ ಸಹಿತ  ಸೇರಿಸಿ ಪಾವತಿಸಲು ಭಾದ್ಯಸ್ಥರಾಗಿರುತ್ತಾರೆ ಹಾಗೂ ರೂ.25,000/- ಪರಿಹಾರ  ಮತ್ತು ರಾಜ್ಯದ ವೆಚ್ಚವಾಗಿ  ರೂ.10,000/- ಮೊತ್ತವನ್ನು ನೀಡುವಂತೆ ಆದೇಶ ಮಾಡಿರುತ್ತಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top