ಪುತ್ತೂರು: ಯುಎಇ ನ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ (ಐ.ಎಸ್ .ಸಿ.) ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆಯಾಗಿದ್ದಾರೆ.
ಜಯರಾಮ ರೈಯವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾಗಿದ್ದಾರೆ.
ಜಗತ್ತಿನ ನಂ.1 ಅನಿವಾಸಿ ಭಾರತೀಯ ಸಂಸ್ಥೆಯ ಚುನಾವಾಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದ ಗೆಲವು ಸಾಧಿಸಿದ ಹೆಮ್ಮೆ ಅವರದ್ದು. ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ.
























