ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಹತ್ತನೆಯ ತರಗತಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಸಾಧಿಸಿದ್ದಾರೆ.

ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಸಂಸ್ಥೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದರೆ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ತಾಲೂಕಿನ ಮೊದಲ ಎಂಟು ರ್ಯಾಂಕ್‌ ಗಳನ್ನು ಅಂಬಿಕಾ ವಿದ್ಯಾಲಯ ತನ್ನದಾಗಿಸಿಕೊಂಡಿದೆ.

ಶ್ರೀಲಕ್ಷ್ಮೀ ಎಸ್.ಸಿ. 96.2% ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ, ಜಸ್ವಿತ್ 95.4% ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಭಿನವ ವಸಿಷ್ಟ 94.8%, ಅವನೀಶ ಕೃಷ್ಣ ಎಂ. 94.8%, ಯಶಸ್ವೀ ಸುರುಳಿ 94.6%, ಸಿಂಚನ ಹರೀಶ್ ಪಣಂಬು 94.6, ಕುಶಿ ಪಿ.ಡಿ 94.4%, ಅದ್ವಿಕ್ ಕಲ್ಲುರಾಯ 94.2, ಅಂಶಕ ಬಿ.ಜಿ. 93.2%, ಆರುಂಧತಿ ಎಲ್.ಆಚಾರ್ಯ 92.8%, ಪ್ರವರ್ಧನ್ ಕೆ.ಪಿ 91.8%, ದೈವಿಕ್ ಹೆಬ್ಬಾರ್ 91.8%, ಶ್ರೀಶಾಮ್ ಎಸ್ ನಾಯ್ಕ್ 91.1%, ಶ್ಲೇಶ್ ಅಲೆಕ್ಕಾಡಿ ಚಂದ್ರಶೇಖರ 90.8%, ಚಂದನ ಇ. 90.4%, ಆತ್ರೇಯ ಭಟ್ ಎ.ಜಿ. 90%, ಸ್ವಸ್ತಿಕ್ ಎಸ್. ನಾಯ್ಕ್ 86.2%, ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.































 
 

ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್.ನಟ್ಟೋಜ ಹಾಗೂ ಪ್ರಾಂಶುಪಾಲೆ ಮಾಲತಿ ಡಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top