ವಿಟ್ಲ: ಕಷ್ಟದಲ್ಲಿರುವ ದಾಮೋದರ ಗೌಡರಿಗೆ ಚಂದಳಿಕೆ ಯುವಕೇಸರಿ ಅಬೀರಿ- ಅತಿಕಾರಬೈಲು ಸಂಘಟನೆ ವತಿಯಿಂದ 10,000 ರೂ. ಚೆಕ್ ಹಾಗೂ ದೈನಂದಿನ ಖರ್ಚಿಗಾಗಿ 26 ಕೆ. ಜಿ ಅಕ್ಕಿಯನ್ನು ಹಸ್ತಾಂತರಿಸಲಾಯಿತು.
ವಿಟ್ಲ ಮೂಡ್ನೂರು ಗ್ರಾಮದ ಮಾಡತ್ತಾರು ದರ್ಭೆ ನಿವಾಸಿ ದಾಮೋದರ ಗೌಡ ಅವರು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು, ವರ್ಷಗಳ ಹಿಂದೆ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೆಂಡತಿಯಲ್ಲೂ ಆರೋಗ್ಯ ಸಮಸ್ಯೆಯುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಮನೆಯಲ್ಲಿ ಔಷಧಿ ಮಾಡುತ್ತಿದ್ದು, ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಹುಡುಗ ಮನೆಯಲ್ಲಿದ್ದು ಮನೋ ಔಷಧಿ ಪಡೆಯುತ್ತಿದ್ದಾನೆ. ಒಬ್ಬ ಹುಡುಗ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
























