ಪುತ್ತೂರು: ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ನಗರದ ಬಪ್ಪಳಿಗೆ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಸೀಟು ಹಾರಿಹೋಗಿದ್ದು, ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದು, ಸಿಂಗಾಣಿಯ ಕಮಲ ಅವರ ಮನೆಗೆ ತಾತ್ಕಾಲಿಕವಾಗಿ ಶಾಸಕರು ಟರ್ಪಾಲ್ ಹಾಕಿಸಿದ್ದಾರೆ. ಉರ್ಲಾಂಡಿಗೆ ಭೇಟಿ ನೀಡಿದ ಶಾಸಕರು ಮನೆ ಮೇಲೆ ಬಿದ್ದಿರುವ ಮರವನ್ನು ತಕ್ಷಣ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ. ತಾತ್ಕಾಲಿಕವಾಗಿ ಎರಡೂ ಮನೆಗೂ ನೆರವಿನ ಭರವಸೆಯನ್ನು ನೀಡಿದ್ದಾರೆ.
ಮಂಜಲ್ಪಡ್ಪು ಬಳಿಯ ಸುದಾನ ಶಾಲಾ ಬಳಿ ಬೃಹತ್ ಗಾತ್ರದ ಮರವೊಂದು ಅಂಗಡಿ ಮೇಲೆ ಬಿದ್ದ ಘಟನೆಯೂ ನಡೆದಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ದಿನೇಶ್ ಪಿ ವಿ, ಮೋನು ಬಪ್ಪಳಿಗೆ, ಇಸ್ಮಾಯಿಲ್ ಬೊಳುವಾರು, ವಿಲ್ಫಿ, ಕೇಶವ ಉಲಾಂಡಿ, ಕುಮಾರ್ ಉರ್ಲಾಂಡಿ, ಸೂರ್ಯ,ವಿಲ್ಪ್ರೆಡ್ ಪೆರ್ನಾಂಡಿಸ್, ಶ್ರೀಕಾಂತ್, ದೀಕ್ಷಿತ್ ಮೊದಲಾದವರು ಉಪಸ್ತಿತರಿದ್ದರು.
























