ಪ್ರೊ.ಕೃಷ್ಣ ಕಾರಂತ್ ಅವರಿಗೆ ಡಾಕ್ಟರೇಟ್ ಪದವಿ

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ್ ಅವರು ಆಂದ್ರಪ್ರದೇಶದ ಕುಪ್ಪಂ ನ  ದ್ರಾವಿಡಿಯನ್ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಸಿಂಥೆಸಿಸ್ “Synthesis and Characterizations of some bioactive molecules: Triazolopyrimidine, Quinoline,Benzisoxalzole and Benzimidazole Derivatives ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.

ಅವರು ಉಜಿರೆ ಎಸ್.ಡಿ.ಎಂ. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ.ಪಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ  ಮಹಾಪ್ರಬಂಧವನ್ನು ಮಂಡಿಸಿದ್ದಾರೆ.

ಪ್ರೊ.ಕೃಷ್ಣ ಕಾರಂತ್ ಸುಮಾರು 34 ವರ್ಷಗಳಿಂದ ರಸಾಯನಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಾಂಚನ ನಿವಾಸಿ ದಿ.ವಿಷ್ಣು ಕಾರಂತ ಹಾಗೂ ದಿ.ಗೌರಿ ಕಾರಂತ ದಂಪತಿ ಪುತ್ರರಾಗಿದ್ದು ಪ್ರಸ್ತುತ ಪುತ್ತೂರಿನ ಕಾರ್ಜಲ್ ಬಯಂಬೆಯಲ್ಲಿ ವಾಸ್ತವ್ಯವಾಗಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top